ದಾವಣಗೆರೆ,ಆ.13- ಇಲ್ಲಿನ ಎಂ.ಸಿ.ಕಾಲೋನಿ `ಬಿ’ ಬ್ಲಾಕ್ನ ನಾಗರಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷರಾಗಿ ಅಂದನೂರು ಮುಪ್ಪಣ್ಣ, ಉಪಾಧ್ಯಕ್ಷರಾಗಿ ಬಿ.ಹೆಚ್.ಪರಶುರಾಮಪ್ಪ, ಹುಲ್ಲತ್ತಿ ಎಸ್.ಸಿ, ಕಾರ್ಯದರ್ಶಿಯಾಗಿ ವಸಂತ್ ಶಾಮನೂರು, ಜಂಟಿ ಕಾರ್ಯದರ್ಶಿಯಾಗಿ ಎಸ್.ಬಸವರಾಜ್ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಕೆ.ಎಸ್. ಮಹೇಶ್ವರಪ್ಪ, ಎಸ್.ಟಿ.ಕುಸುಮ ಶೆಟ್ಟಿ, ಎಸ್.ಗುರುಮೂರ್ತಿ, ಜಿ.ಎಸ್.ಅಜ್ಜಪ್ಪ, ಕೆ.ಎಸ್.ನಾಗಭೂಷಣ್ ಕಡೇಕೊಪ್ಪ, ಕೆ.ಹಾಲಪ್ಪ, ದೇವೇಂದ್ರಪ್ಪ ಕೆ.ಸಿ., ರವೀಂದ್ರ ನಾಥ್ ಕೆ.ಇ, ಆರ್.ಜಿ.ದಾನೇಶ್ ಮತ್ತು ಚಂದನ್ ಪಲ್ಲಾಗಟ್ಟಿ ಆಯ್ಕೆಯಾಗಿದ್ದಾರೆ.
ವಿಶೇಷ ಆಹ್ವಾನಿತರಾಗಿ ಎಸ್.ಕೆ.ವೀರಣ್ಣ, ದೇವಾಚಾರ್, ಬಿ.ಎ.ಅಂಗಡಿ ಹಾಗೂ ಈ ಭಾಗದ ಪಾಲಿಕೆ ಸದಸ್ಯರುಗಳಾದ ಗೌರಮ್ಮ ಗಿರೀಶ್,
ರೇಖಾ ಜಿ. ಸುರೇಶ್, ಕೆ ಪ್ರಸನ್ನಕುಮಾರ್, ಮಂಜುನಾಥ ಗಡಿಗುಡಾಳ್ ಅವರು ಗೌರವ ಸದಸ್ಯರಾಗಿದ್ದಾರೆ.