ಶಿರಮಗೊಂಡನಹಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ಲಲಿತಮ್ಮ

ಶಿರಮಗೊಂಡನಹಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ಲಲಿತಮ್ಮ

ಉಪಾಧ್ಯಕ್ಷರಾಗಿ ವಿನುತಾ ಆಯ್ಕೆ

ದಾವಣಗೆರೆ, ಆ.11- ತಾಲ್ಲೂಕಿನ ಶಿರಮಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಲಲಿತಮ್ಮ ದೇವೇಂದ್ರಪ್ಪ ಮತ್ತು ಉಪಾಧ್ಯಕ್ಷರಾಗಿ ವಿನುತಾ ಎಂ. ಸುರೇಶ್‍ಬಾಬು ಆಯ್ಕೆಯಾಗಿದ್ದಾರೆ.

ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 13 ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಎಸ್‍ಟಿಗೆ ಮೀಸಲಿದ್ದು, ಲಲಿತಮ್ಮ ದೇವೇಂದ್ರಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಿದ್ದು, ವಿನುತಾ ಎಂ ಸುರೇಶ್‍ಬಾಬು, ದೀಪ ಶಿವಕುಮಾರ್ ನಾಮಪತ್ರ ಸಲ್ಲಿಸಿದರು. ವಿನುತಾ ಎ.ಎಂ. ಸುರೇಶ್‍ಬಾಬು ಅವರು 11 ಮತಗಳನ್ನು ಪಡೆದು ಗೆಲುವು ಸಾಧಿಸಿದರು ಎಂದು ಚುನಾವಣಾ ಅಧಿಕಾರಿಯಾಗಿದ್ದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ನಿಗಮದ ದೇವರಾಜ್ ಘೋಷಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಯಲಕ್ಷ್ಮಿ ಅವರು ಚುನಾವಣಾ ಕಾರ್ಯವನ್ನು ನಡೆಸಿದರು. ಗ್ರಾಮ ಪಂಚಾಯತಿ ಸದಸ್ಯರಾದ ಆರ್ ದಿನೇಶ್, ರೇಣುಕಾಬಾಯಿ, ಪ್ರಸನ್ನ, ಮಂಜುನಾಥ್, ಜ್ಯೋತಿ, ಲೀಲಾವತಿ, ರೇವಣಸಿದ್ದಪ್ಪ, ಮಲ್ಲಿಕಾರ್ಜುನ್, ಬಸವರಾಜ್, ದೀಪ, ಶಾಂತಮ್ಮ ಇವರುಗಳು ಇದ್ದರು.

error: Content is protected !!