ಕುರ್ಕಿ ಗ್ರಾ.ಪಂ. ಅಧ್ಯಕ್ಷರಾಗಿ ಕೆ.ಜಿ. ನಾಗಮ್ಮ ನಂಜುಂಡಪ್ಪ

ಕುರ್ಕಿ ಗ್ರಾ.ಪಂ. ಅಧ್ಯಕ್ಷರಾಗಿ ಕೆ.ಜಿ. ನಾಗಮ್ಮ ನಂಜುಂಡಪ್ಪ

ಉಪಾಧ್ಯಕ್ಷರಾಗಿ ಕೆ.ಎಂ. ನಿಂಗಪ್ಪ

ದಾವಣಗೆರೆ, ಆ. 11- ತಾಲ್ಲೂಕಿನ ಕುರ್ಕಿ ಗ್ರಾಮ ಪಂಚಾಯತಿಗೆ ಅಧ್ಯಕ್ಷರಾಗಿ ಶ್ರೀಮತಿ ಕೆ.ಜಿ. ನಾಗಮ್ಮ ನಂಜುಂಡಪ್ಪ (ಗೌಡ್ರು), ಉಪಾಧ್ಯಕ್ಷರಾಗಿ ಕೆ.ಎಂ. ನಿಂಗಪ್ಪ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಆಯ್ಕೆ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರುಗಳಾದ ಬಿ. ಹನುಮಂತಪ್ಪ, ಬಿ.ಓ. ರಾಜು, ಶಿವಮೂರ್ತಿ, ವಿನಾಯಕ, ನಂದ್ಯಪ್ಪ, ಸಿ.ಕೆ. ಬಸವರಾಜಪ್ಪ, ಬಸಪ್ಪ, ಪ್ರಕಾಶ, ನಳಿನಾಕ್ಷಿ, ರತ್ನಮ್ಮ , ವಿಶಾಲಾಕ್ಷಮ್ಮ, ಹನುಮಕ್ಕ, ಮೇಘ, ಪುಷ್ಪಾವತಿ, ರೇಣುಕಮ್ಮ, ನಂದಿನಿ, ಮಂಜುಳ ಮತ್ತು ಗ್ರಾ.ಪಂ. ಸಿಬ್ಬಂದಿ ಉಪಸ್ಥಿತರಿದ್ದರು.

error: Content is protected !!