ದಾವಣಗೆರೆ, ಆ.11- ಶಿವಮೊಗ್ಗದಲ್ಲಿ ಇತ್ತೀಚಿಗೆ ನಡೆದ ನಾಲ್ಕನೇ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ದಾವಣಗೆರೆ ಗರುಡ ಕರಾಟೆ ಸಂಸ್ಥೆಯ ಕ್ರೀಡಾಪಟು ಬಿ.ಎಸ್. ಅಭಯ್ ಅವರು ಕತಾಸ್‌ನಲ್ಲಿ ಎರಡನೇ ಮತ್ತು ಕುಮಟೆಯಲ್ಲಿ ಮೂರನೇ ಸ್ಥಾನ ಪಡೆದು ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದಿದ್ದಾರೆ.
ಅಭಯ್, ಪೊಲೀಸ್ ಇಲಾಖೆಯ ಉದ್ಯೋಗಿ ಬಿ.ಪಿ. ಸುರೇಶ್ ಕುಮಾರ್ ಅವರ ಪುತ್ರ. ಇವರ ತರಬೇತುದಾರ ಸಂಜು, ಸೇಂಟ್ ಜಾನ್ಸ್ ಶಾಲೆಯ ಪ್ರಾಂಶುಪಾಲರು ಅಭಿನಂದಿಸಿದ್ದಾರೆ.