ದಾವಣಗೆರೆ, ಆ. 11- ಮಳೆಗಾಗಿ ಪ್ರಾರ್ಥಿಸಿ ಅಣಜಿ ಗ್ರಾಮ ದೇವತೆ ಶ್ರೀ ಮಾರೆಮ್ಮ, ಶ್ರೀ ಹೊನ್ನಮ್ಮ ಮತ್ತು ಗ್ರಾಮದ ಎಲ್ಲಾ ದೇವರುಗಳಿಗೆ ಇಂದು ವಿಶೇಷ ಪೂಜೆ ಸಲ್ಲಿಸಲಾಯಿತು. ದೇಶದ ಬೆನ್ನೆಲುಬಾದ ರೈತರ ಬೆಳೆಗಳಿಗೆ ತತ್‌ಕ್ಷಣವೇ ಅತ್ಯಗತ್ಯವಾಗಿ ರುವ ಸಮೃದ್ಧ ಮಳೆಗಾಗಿ ಪ್ರಾರ್ಥಿಸಿ, ಎಲ್ಲಾ ದೇವರುಗಳಿಗೆ ವಿಶೇಷ ಅಭಿಷೇಕ, ಸದ್ಭಕ್ತರಿಗೆ ಪ್ರಸಾದ ವಿನಿಯೋಗ ನಡೆಸಲಾಯಿತು.
ಅಣಜಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸಂಗನಬಸಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್, ಗ್ರಾ.ಪಂ. ಮಾಜಿ ಅಧ್ಯಕ್ಷ ಶೆಟ್ರು ಮಲ್ಲಿಕಾರ್ಜುನಪ್ಪ, ನಿವೃತ್ತ ಎಎಸ್ಐ ಟಿ. ಹಾಲಪ್ಪ ಮತ್ತಿತರರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.