ಕೆಎಸ್‍ಸಿಎ ತುಮಕೂರು ವಲಯ ಅಂಡರ್ 16 ಕ್ರಿಕೆಟ್ ತಂಡದ ಆಯ್ಕೆ ಟ್ರಯಲ್

ಕ್ರಿಕೆಟ್ : ಅಂಡರ್ 16 ಆಯ್ಕೆ ಟ್ರಯಲ್ಸ್ ಇಂದು

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‍ಸಿಎ)ನ ತುಮಕೂರು ವಲಯ ಮಟ್ಟದ 16 ವರ್ಷದೊಳಗಿನ ಜಿಲ್ಲಾ ತಂಡಗಳ ಆಯ್ಕೆ ಟ್ರಯಲ್ಸ್ ಇಂದು ನಡೆಯಲಿದೆ.

ದಾವಣಗೆರೆ ಜಿಲ್ಲಾ ತಂಡದ ಆಯ್ಕೆಯು ಇಂದು ಬೆಳಿಗ್ಗೆ 9 ಗಂಟೆಗೆ ಎಂಬಿಎ ಟರ್ಫ್ ಮೈದಾನದಲ್ಲಿ ನಡೆಯಲಿದ್ದು, ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೋ- ಆರ್ಡಿನೇಟರ್ ಕೆ.ಎನ್.ಗೋಪಾಲಕೃಷ್ಣ (78996 10318) ಅವರನ್ನು ಸಂಪರ್ಕಿಸಬಹುದಾಗಿದೆ.

ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಹಾಗೂ ತುಮಕೂರು ಜಿಲ್ಲೆಗಳು ಈ ವಲಯದ ವ್ಯಾಪ್ತಿಗೆ ಬರಲಿದ್ದು, ವಲಯದ ಅಂತರ ಜಿಲ್ಲಾ ಮಟ್ಟದ ಪಂದ್ಯಾವಳಿಯು ಇದೇ ದಿನಾಂಕ 18 ರಿಂದ 20ರ ವರೆಗೆ ದಾವಣಗೆರೆಯಲ್ಲಿ ನಡೆಯಲಿದೆ. ಆಯಾ ಜಿಲ್ಲಾ ತಂಡಗಳ ವ್ಯವಸ್ಥಾಪಕರು ಮಾಹಿತಿಗೆ ವಲಯ ವ್ಯವಸ್ಥಾಪಕ ಕೆ.ಎಂ. ಪವನ್‍ಕುಮಾರ್ ಅವರನ್ನು ಸಂಪರ್ಕಿಸಬಹುದು ಎಂದು ಕೆಎಸ್‍ಸಿಎ ವಲಯದ ಅಧ್ಯಕ್ಷ ಎಸ್.ಎಸ್.ಬಕ್ಕೇಶ್ ಹಾಗೂ ಸಂಚಾಲಕ ಶಶಿಧರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!