ಶಿವಗೋಷ್ಠಿ ಸಮಿತಿ, ಶ್ರೀ ಶಿವಕುಮಾರಸ್ವಾಮಿ ಮಹಾಮಂಟಪ ಹಾಗೂ ಸಾದರ ನೌಕರರ ಬಳಗ ಇವರುಗಳ ಸಹಯೋಗದಲ್ಲಿ `ಶಿವಗೋಷ್ಠಿ 298′ – ಸ್ಮರಣೆ 70 ಕಾರ್ಯಕ್ರಮವನ್ನು ಇಂದು ಸಂಜೆ 6.30 ಕ್ಕೆ ತರಳಬಾಳು ಬಡಾವಣೆಯ ಮಾಗನೂರು ಬಸಪ್ಪ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಧ್ಯಕ್ಷತೆಯನ್ನು ಎಂ.ಬಿ. ಸಂಗಮೇಶ್ವರ ಗೌಡ್ರು ವಹಿಸುವರು. ಮುಖ್ಯ ಅತಿಥಿಗಳಾಗಿ ಡಾ. ರುದ್ರಮುನಿ ಹಿರೇಮಠ್ ಆಗಮಿಸುವರು. ಕಾರ್ಯಕ್ರಮದಲ್ಲಿ `ಬಸವಣ್ಣನವರ ವಚನಗಳಲ್ಲಿ ತನು-ಮನ-ಧನ ಪ್ರಜ್ಞೆ’ ವಿಚಾರ ಕುರಿತು ಡಾ. ಶಿವನಗೌಡ ಕಡಬಗೆರೆ ಮಾತನಾಡುವರು. `ಸಾಮಾನ್ಯ ಕಾಯಿಲೆಗಳು ಹಾಗೂ ಉಪಚಾರ’ ವಿಷಯ ಕುರಿತು ಉಪನ್ಯಾಸ ನಡೆಯುವುದು.
ಇದೇ ಸಂದರ್ಭದಲ್ಲಿ ಲಿಂ. ಈಟಿ ನಿಂಗಪ್ಪ ಹರಪನಹಳ್ಳಿ, (ನಿವೃತ್ತ ಸಹಾಯಕ ಅಭಿಯಂ ತರರು) ಇವರ ಸ್ಮರಣೆ ನಡೆಯುವುದು. ಲಿಂಗೈಕ್ಯರ ಸ್ಮರಣೆಯನ್ನು ಶ್ವಾಸಕೋಶ ತಜ್ಞ ಡಾ. ಅಜಿತ್ ಈಟಿ ನಡೆಸಿಕೊಡುವರು. ಕದಳಿ ಮಹಿಳಾ ವೇದಿಕೆಯಿಂದ ವಚನ ಗಾಯನ ನಡೆಯುವುದು.