ಗುತ್ತೂರು ಕಾಲೋನಿ ರಸ್ತೆ ದುರಸ್ತಿಗೆ ಒತ್ತಾಯ

ಗುತ್ತೂರು ಕಾಲೋನಿ ರಸ್ತೆ ದುರಸ್ತಿಗೆ ಒತ್ತಾಯ

ಹರಿಹರ, ಅ. 11 – ನಗರದ ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ವತಿಯಿಂದ ಗುತ್ತೂರು ಕಾಲೋನಿ ಬಳಿ ರಸ್ತೆಯನ್ನು ದುರಸ್ತಿ ಪಡಿಸುವಂತೆ ಆಗ್ರಹಿಸಿ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.

ಹರಪನಹಳ್ಳಿ ಮಾರ್ಗಕ್ಕೆ ಹೋಗುವ ಗುತ್ತೂರು ಕಾಲೋನಿಯಲ್ಲಿರುವ ಮರುಳ ಸಿದ್ದೇಶ್ವರ ಬೇಕರಿ ಮುಂಭಾಗದ ರಸ್ತೆ ಹ ಲವಾರು ವರ್ಷಗಳಿಂದ ತಗ್ಗು ಗುಂಡಿ ಗಳಿಂದ ಕೂಡಿದೆ. ಇದರಿಂದ ವಾಹನ ಸವಾರರಿಗೆ ಹಾಗೂ ಸಾರ್ವಜ ನಿಕರಿಗೆ ತೊಂದರೆ ಯಾಗಿದೆ. ಅಪಘಾತ ಗಳ ಘಟನೆಗಳೂ ನಡೆದಿವೆ ಎಂದು ಸಂಘಟ ನೆಯ ಮನವಿಯಲ್ಲಿ ತಿಳಿಸಲಾಗಿದೆ. ವ್ಯವಸ್ಥಿತ ಚರಂಡಿ ಇಲ್ಲದೇ ಮಳೆ ನೀರು ರಸ್ತೆ ಮೇಲೆ ಆವರಿಸುತ್ತಿದೆ. ರಸ್ತೆಯ ಎರಡೂ ಕಡೆ ಚರಂಡಿಯ ಅಗತ್ಯವಿದೆ. ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ಮಾಡಿ ಕ್ರಮ ತೆಗೆದುಕೊ ಳ್ಳಬೇಕೆಂದು ಸಂಘಟನೆ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಎಸ್. ಗೋವಿಂದ್, ಉಪಾಧ್ಯಕ್ಷ ಸತೀಶ್ ಎಂ.ಆರ್ ಸುನಿಲ್, ಸಿ.ಎಚ್, ಶಬರೀಶ, ಮಧು ಎಂ, ಶ್ರೀನಿವಾಸ್ ವೀರೇಶ್, ಕಾಂತೇಶ್ ಇತರರು ಉಪಸ್ಥಿತರಿದ್ದರು.

error: Content is protected !!