ಚನ್ನಗಿರಿ, ಆ. 10 – ತಾಲ್ಲೂಕಿನ ಹಿರೇಕೋಗಲೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಎರಡನೇ ಬಾರಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಿ.ಆರ್. ಸುಮ ಶಿವಕುಮಾರ್ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಎ.ಡಿ. ರಮೇಶ್ ಆಯ್ಕೆಯಾಗಿದ್ದಾರೆ. ಶಾಸಕ ಬಸವರಾಜು ವಿ. ಶಿವಗಂಗಾ ಅವರು ಶುಭ ಕೋರಿದರು.
ಚುನಾವಣಾಧಿಕಾರಿಯಾಗಿ ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಶಿವಕುಮಾರ ಕಾರ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ಜಿ. ಸ್ವಾಮಿ, ಕೆ.ಪಿ. ವೆಂಕಟೇಶ್, ಕೆ.ಓ. ಶಿವಕುಮಾರ್, ಎಸ್.ವೈ. ಯೋಗೀಶ್, ಮಂಜುನಾಥ್ ಕೆ., ಪ್ರಸನ್ನ ಬನ್ನಿಹಟ್ಟಿ, ಶರತ್‌ಕುಮಾರ್ ಎಸ್.ಎಸ್., ಗೋವಿಂದಸ್ವಾಮಿ ಕೆ.ವಿ., ಜೀವನ್ ಕುಮಾರ್, ಶಿವಕುಮಾರ್ ಹೆಚ್.ವಿ. ಉಪಸ್ಥಿತರಿದ್ದರು.