ಜಗಳೂರು, ಆ.10- ತಾಲ್ಲೂಕಿನ ಹಿರೇಮಲ್ಲನಹೊಳೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಟಿ.ಓ.ಶ್ರೀನಿವಾಸ್, ಉಪಾಧ್ಯಕ್ಷರಾಗಿ ಎ.ಬೇಬಿ ಆಯ್ಕೆಯಾದರು.
ಒಟ್ಟು 20 ಜನ ಸದಸ್ಯರಿದ್ದು, ಸಾಮಾನ್ಯ ಮೀಸಲು ಅಧ್ಯಕ್ಷ ಸ್ಥಾನಕ್ಕೆ ಟಿ.ಓ.ಶ್ರೀನಿವಾಸ್, ಜೆ.ಎಂ.ಶಾಂತಮ್ಮ, ಎಂ.ವೀಣಾ ಅವರು ನಾಮಪತ್ರ ಸಲ್ಲಿಸಿದ್ದರು. ಕೊನೆಗೆ ವೀಣಾ ಅವರು ನಾಮಪತ್ರ ಹಿಂಪಡೆದರು. ಕಣದಲ್ಲಿ ಉಳಿದ ಇಬ್ಬರ ನಾಮಪತ್ರಗಳು ಊರ್ಜಿತವಾಗಿದ್ದು, ಕೊನೆಯಲ್ಲಿ ಇಬ್ಬರು ಸ್ಪರ್ಧಿಗಳಿಗೆ ನಡೆದ ಚುನಾವಣೆ ಯಲ್ಲಿ ಜೆ.ಎಂ.ಶಾಂತಮ್ಮ ಅವರು 9 ಮತಗಳನ್ನು ಪಡೆದು ಪರಾಭವಗೊಂಡರೆ, ಟಿ.ಓ.ಶ್ರೀನಿವಾಸ್ 11 ಮತಗಳನ್ನು ಪಡೆದು ಗೆಲುವು ಸಾಧಿಸಿದರು.
ಎಸ್ಸಿ ಮಹಿಳಾ ಮೀಸಲು ಉಪಾಧ್ಯಕ್ಷ ಸ್ಥಾನಕ್ಕೆ ಎ.ಬೇಬಿ ಹಾಗೂ ವಿಶಾಲಮ್ಮ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ವಿಶಾಲಮ್ಮ ಅವರು 9 ಮತಗಳನ್ನು ಪಡೆದು ಪರಾಭವಗೊಂಡರೆ, ಎ.ಬೇಬಿ 11 ಮತಗಳನ್ನು ಪಡೆದು ಗೆಲುವು ಸಾಧಿಸಿದರು ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತೋಟಗಾರಿಕೆ ಇಲಾಖೆ ಪ್ರಭಾರಿ ಸಹಾಯಕ ನಿರ್ದೇಶಕ ರಾಜೇಶ್ ಘೋಷಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ರಜಿಯಾಬಿ, ಬಿ.ಸುರೇಶ್, ಎಂ.ಈರಮ್ಮ, ಎ.ಎಸ್.ತಿಪ್ಪೇಸ್ವಾಮಿ, ಪದ್ಮಕ್ಕ, ಮಾರಪ್ಪ, ಜಿ.ಆರ್.ನಾರಾಯಣರೆಡ್ಡಿ, ಎಂ.ವೀಣಾ, ರಂಗಪ್ಪ, ಎನ್.ಸಿ.ನಾಗರಾಜಯ್ಯ, ದ್ಯಾಮಕ್ಕ, ಆರ್.ಶಿವಣ್ಣ, ಶಿವರುದ್ರಮ್ಮ, ರೇಣುಕಮ್ಮ, ಅನೂಪ್ ಎಲ್.ರಾಯಪಾಟಿ, ಶರಣಪ್ಪ, ಪಿಡಿಓ ಅರವಿಂದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.