ಮಲೇಬೆನ್ನೂರು, ಆ. 10- ಹರಿಹರ ತಾಲ್ಲೂಕು ಕುರುಬ ಸಮಾಜದ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಶೇ. 85 ಕ್ಕಿಂತ ಹೆಚ್ಚು ಮತ್ತು ಪಿಯುಸಿಯಲ್ಲಿ ಶೇ. 80 ಕ್ಕಿಂತ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಬರುವ ಸೆಪ್ಟೆಂಬರ್ 10 ರಂದು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಬೆಳ್ಳೂಡಿ ಶಾಖಾ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಾ ಪುರಸ್ಕಾರಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಗಸ್ಟ್ 25 ರೊಳಗೆ ಅಗತ್ಯ ದಾಖಲೆಗಳನ್ನು ಹರಿಹರ ನಗರದ ಕಾಳಿದಾಸ ಶಾಲೆಗೆ ಸಲ್ಲಿಸಲು ಹರಿಹರ ತಾ. ಕನಕ ನೌಕರರ ಸಂಘ ಮನವಿ ಮಾಡಿದೆ. ಮಾಹಿತಿಗಾಗಿ 78292 71286, 89719 62969, 63626 68178, 99019 09658 ಸಂಪರ್ಕಿಸಬಹುದು.
January 24, 2025