ದಾವಣಗೆರೆ, ಆ. 10 – ನರಗನಹಳ್ಳಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀಮತಿ ಆಶಾ ನಾಗರಾಜ (ಸಾಮಾನ್ಯ ಮಹಿಳೆ) ಆಯ್ಕೆಯಾಗಿದ್ದಾರೆ.
ಆಶಾ 11 ಮತಗಳ ಅಂತರದಲ್ಲಿ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಆಶಾ ಬಾಯಿ ಸಂತೋಷನಾಯ್ಕ (ಪ. ಜಾತಿ) ಆಯ್ಕೆಯಾಗಿದ್ದಾರೆ. ಚುನಾವಣೆಯು ಚುನಾವಣೆ ಅಧಿಕಾರಿ ಪುಷ್ಪ ಲತಾ ಸಮ್ಮುಖದಲ್ಲಿ ನಡೆಯಿತು. ಪಿ ಡಿ ಓ ಕೃಷ್ಣಮೂರ್ತಿ ಡಿ.ಟಿ. ಶ್ರೀಮತಿ ಶೃತಿ, ಶ್ರೀಮತಿ ಮೀನಾಕ್ಷಿ , ಶ್ರೀಮತಿ ಉಷಾ, ಶ್ರೀಮತಿ ದುರುಗಮ್ಮ ಶ್ರೀಮತಿ ಅಕ್ಕಮ್ಮ , ಶ್ರೀಮತಿ ಲಲಿತ , ಶ್ರೀಮತಿ ತಾರಕೇಶ್ವರಿ, ಶ್ರೀ ಚಂದ್ರಶೇಖರ ಡಿ ಎನ್ , ಕಲ್ಲೇಶಪ್ಪ, ರಂಗಸ್ವಾಮಿ, ಧ್ಯಾಮಪ್ಪ, ಶಿವರುದ್ರಪ್ಪ, ಸುರೇಶ, ಬಸವರಾಜಪ್ಪ, ರವಿ, ಎಸ್ ಡಿ ಎ ರೂಪಮ್ಮ, ಗಣಕಯಂತ್ರ ನಿರ್ವಾಹಕ ನವೀನ ಕುಮಾರ ಎನ್ ಆರ್, ಕರ ವಸೂಲಿಗಾರ ಮಲ್ಲಿಕಾರ್ಜುನ ಬಿಕೆ ಇತರರು ಇದ್ದರು.