ನಗರದಲ್ಲಿ ಸುಸಜ್ಜಿತ ನೂತನ `ಚಾರ್ಟರ್ಡ್ ಅಕೌಂಟೆಂಟ್ಸ್ ಭವನ’ದ ಬಗ್ಗೆ ಇನ್‌ಸ್ಟಿಟ್ಯೂಟ್ ಆಫ್ ಚಾಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ನವದೆಹಲಿ) ಅಧ್ಯಕ್ಷ ಸಿಎ ಅನಿಕೇತ್ ಸುನಿಲ್ ತಲಾಟೆ ಮೆಚ್ಚುಗೆ
ದಾವಣಗೆರೆ, ಆ.10- ನಗರದಲ್ಲಿ ಈಚೆಗೆ ಉದ್ಘಾಟನೆಗೊಂಡಿರುವ ದಾವಣಗೆರೆ ಚಾರ್ಟರ್ಡ್ ಅಕೌಂಟೆಂಟ್ಸ್ ಅಸೋಸಿಯೇ ಷನ್ನಿನ `ಚಾರ್ಟರ್ಡ್ ಅಕೌಂಟೆಂಟ್ಸ್ ಭವನ’ಕ್ಕೆ ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ನವದೆಹಲಿ) ಅಧ್ಯಕ್ಷ ಸಿಎ ಅನಿಕೇತ್ ಸುನಿಲ್ ತಲಾಟೆ ಅವರು ಇಂದು ಭೇಟಿ ನೀಡಿದ್ದರು.
ಅನಿಕೇತ್ ಸುನಿಲ್ ತಲಾಟೆ ಅವರೊಂದಿಗೆ ಬೋರ್ಡ್ ಆಫ್ ಸ್ಟಡೀಸ್ ಐ.ಸಿ.ಎ.ಐ. ನವದೆಹಲಿ ಇದರ ಛೇರ್ಮನ್ ಸಿಎ ದಯನಿವಾಸ್ ಶರ್ಮ, ಕರ್ನಾಟಕದಿಂದ ಕೇಂದ್ರೀಯ ಸಮಿತಿಯ ಪ್ರತಿನಿಧಿ ಕೋತಾ ಶ್ರೀನಿವಾಸ್, ದಕ್ಷಿಣ ಪ್ರಾಂತೀಯ ಅಧ್ಯಕ್ಷ ಸಿಎ ಪನ್ನರಾಜ್, ಉಪಾಧ್ಯಕ್ಷರಾದ ಶ್ರೀಮತಿ ಗೀತಾ ಅವರುಗಳೂ ಸಹ ನೂತನ ಭವನಕ್ಕೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಏರ್ಪಾಡಾಗಿದ್ದ ಸರಳ ಸಮಾರಂಭನ್ನುದ್ದೇಶಿಸಿ ಮಾತನಾಡಿದ ಅನಿಕೇತ್ ಸುನಿಲ್ ತಲಾಟೆ ಅವರು, ಮುಂ ದಿನ ದಿನಗಳಲ್ಲಿ ಚಾರ್ಟರ್ಡ್ ಅಕೌಂಟೆಂ ಟ್‌ಗಳಿಗೆ ಪ್ರಪಂಚದಾದ್ಯಂತ ಬೇಡಿಕೆ ಇದ್ದು, ಸಿಎ ಪದವಿ ಪಡೆಯಲು ಹಾಕಿದ ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತಾ ದೊರೆಯುತ್ತದೆ. ಇಂದು ಪ್ರಪಂಚದಲ್ಲಿ ಸಿಎ ವ್ಯಾಸಂಗ ಮಾಡಿ, ವಿವಿಧ ವೃತ್ತಿಯಲ್ಲಿ ಇರುವವರಿಗೆ ಸಾಕಷ್ಟು ಮನ್ನಣೆ ದೊರೆತಿದೆ ಎಂದರು.
ಈಗಾಗಲೇ ಹೊಸ ಪಠ್ಯಕ್ರಮ ಜಾರಿಯಾಗಿದ್ದು, ಇಂದಿನ ತಂತ್ರಜ್ಞಾನದ ಯುಗಕ್ಕೆ ತಕ್ಕಂತೆ ಬದಲಾವಣೆ ಮಾಡಲಾಗಿದ್ದು, ವೃತ್ತಿ ಧರ್ಮಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು. ದಾವಣಗೆರೆ ಅಸೋಸಿಯೇಷನ್ ವಾಚನಾಲಯಕ್ಕೆ ಅಗತ್ಯ ದೇಣಿಗೆ ಮತ್ತು ತಿಂಗಳ ನಿರ್ವಹಣೆಗೆ ಅಗತ್ಯ ದೇಣಿಗೆ ಐ.ಸಿ.ಎ.ಐ. ನವದೆಹಲಿ ವತಿಯಿಂದ ನೀಡುವುದಾಗಿ ಅವರು ಘೋಷಿಸಿದರು.
ದಾವಣಗೆರೆ ಸಿಎ ಅಸೋಸಿಯೇಷನ್ ಗೌರವಾಧ್ಯಕ್ಷರೂ ಆಗಿರುವ ಹಿರಿಯ ಕೈಗಾರಿಕೋದ್ಯಮಿ ಅಥಣಿ ಎಸ್.ವೀರಣ್ಣ ಮಾತನಾಡಿ, ಅಸೋಸಿಯೇಷನ್ ನಡೆದು ಬಂದ ದಾರಿ ಹಾಗೂ ಸ್ವಂತ ಕಟ್ಟಡ ನಿರ್ಮಿಸಲು ಹಾಕಿದ ಶ್ರಮದ ಬಗ್ಗೆ ವಿವರಿಸಿದರು.
ಬೋರ್ಡ್ ಆಫ್ ಸ್ಟಡೀಸ್ ಐ.ಸಿ.ಎ.ಐ. (ನವದೆಹಲಿ) ಛೇರ್ಮನ್ ಸಿಎ ದಯನಿವಾಸ್ ಶರ್ಮಾ, ಕರ್ನಾಟಕದಿಂದ ಕೇಂದ್ರೀಯ ಮಂಡಳಿ ಸದಸ್ಯ ಸಿಎ ಕೋತಾ ಶ್ರೀನಿವಾಸ್, ದಕ್ಷಿಣ ಭಾರತೀಯ ಪ್ರಾಂತ ಅಧ್ಯಕ್ಷ ಸಿಎ ಪನ್ನರಾಜ್, ಉಪಾಧ್ಯಕ್ಷರಾದ ಸಿಎ ಶ್ರೀಮತಿ ಗೀತಾ ಮತ್ತು ಇತರರು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಾವಣಗೆರೆ ಸಿಎ ಅಸೋಸಿಯೇಷನ್ ಅಧ್ಯಕ್ಷ ಸಿಎ ಕಿರಣ್ ಎಸ್.ಪಾಟೀಲ್ ಸ್ವಾಗತಿಸಿದರು. ಕಾರ್ಯದರ್ಶಿ ಸಿಎ ಉಮೇಶ್ ಶೆಟ್ಟಿ ವಂದಿಸಿದರು. ಸಿಎ ಮಹೇಶ್ ಶೇಂಡ್ಗೆ ಕಾರ್ಯಕ್ರಮ ನಿರೂಪಿಸಿದರು.