ಹೊನ್ನಾಳಿ, ಆ.10- ತಾಲ್ಲೂಕಿನ ಮಾಸಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಗೀತಮ್ಮ ತಿಮ್ಮಪ್ಪ ಚುನಾವಣೆ ಮೂಲಕ ಒಂದು ಮತದ ಅಂತರದಿಂದ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಮಮತ ನಾಗಪ್ಪ ಅವಿರೋಧವಾಗಿ ಇಂದು ಆಯ್ಕೆಯಾಗಿದ್ದಾರೆ.
ಮಾಸಡಿ ಪಂಚಾಯಿತಿಯು 11 ಸದಸ್ಯರ ಬಲಹೊಂದಿದ್ದು ಗೀತಮ್ಮ ತಿಮ್ಮಪ್ಪ 6 ಮತ ಪಡೆದು ಆಯ್ಕೆಯಾದರೆ, ಪ್ರತಿಸ್ಪರ್ಧಿ ನೇತ್ರಾವತಿ ನಾಗರಾಜ 5 ಮತ ಪಡೆದು ಒಂದು ಮತದ ಅಂತರದ ಹಿನ್ನಡೆಯ ಮೂಲಕ ಸೋಲನ್ನು ಕಂಡರು.
ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರಾದ ಡಿಎಸ್ ರಾಜಪ್ಪ, ಅಶೋಕ, ಹಳದಪ್ಪ, ನಟರಾಜ, ಲಕ್ಷ್ಮಿ, ಸುಲೋಚನ, ಕಾರ್ಯದರ್ಶಿ ಬಸವರಾಜ್ ಹಾಗೂ ಚುನಾವಣಾಧಿಕಾರಿ ಸಮಾಜ ಕಲ್ಯಾಣ ಇಲಾಖೆ ಹೆಚ್.ಸಿ. ಉಮಾ ಇದ್ದರು.