‘ಭಾರತ್ ಕೋ ಜಾನೋ’ ರಸಪ್ರಶ್ನೆ ಸ್ಪರ್ಧೆ ಎಂಕೆಇಟಿ, ಅಮೃತ ವರ್ಷಿಣಿ ಶಾಲೆ ಪ್ರಥಮ

‘ಭಾರತ್ ಕೋ ಜಾನೋ’ ರಸಪ್ರಶ್ನೆ ಸ್ಪರ್ಧೆ ಎಂಕೆಇಟಿ, ಅಮೃತ ವರ್ಷಿಣಿ ಶಾಲೆ ಪ್ರಥಮ

ದಾವಣಗೆರೆ, ಆ.9- ಭಾರತ ವಿಕಾಸ ಪರಿಷದ್, ಗೌತಮ ಶಾಖೆ  ವತಿಯಿಂದ   ನಗರದ ಮೋತಿ ವೀರಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸ  ಲಾಗಿದ್ದ  `ಭಾರತ್ ಕೋ ಜಾನೋ’  ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ  ಹರಿಹರದ ಎಂ.ಕೆ.ಇ.ಟಿ ಶಾಲೆ ಮತ್ತು ಅಮೃತ ವರ್ಷಿಣಿ ವಿದ್ಯಾಲಯ ಪ್ರಥಮ ಸ್ಥಾನ ಪಡೆದಿವೆ. 

ಜ್ಯೂನಿಯರ್ ವಿಭಾಗದಿಂದ ಮೊದಲ ಸ್ಥಾನವನ್ನು ಎಂ.ಕೆ.ಇ.ಟಿ   ಶಾಲೆಯ ವಿದ್ಯಾರ್ಥಿಗಳಾದ ಸುಜಯ್ ಜೈನ್ ಜೆ.ಪಿ ಮತ್ತು ಅರುಣಾಚಲ ವಿ.ಲದ್ವಾ ತಂಡ ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.   ಸೀನಿಯರ್ ವಿಭಾಗದಲ್ಲಿ ಮೊದಲ ಸ್ಥಾನವನ್ನು ಹರಿಹರದ ಅಮೃತ ವರ್ಷಿಣಿ ವಿದ್ಯಾಯಲಯದ ವಿದ್ಯಾರ್ಥಿಗಳಾದ ಧೀರೇನ್ ಎಂ ಮತ್ತು ಸ್ವಯಂ ಆರ್. ಎಸ್. ತಂಡ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಜ್ಯೂನಿಯರ್ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಅಮೃತ ವರ್ಷಿಣಿ ವಿದ್ಯಾಲಯದ ವಿದ್ಯಾರ್ಥಿಗಳಾದ ರೋಷನ್ ಜಮೀರ್ ಕೆ. ಹೆಚ್. ಮತ್ತು ಸ್ವಪ್ನಿಲ್ ಎಸ್. ಟಿ. ಪಡೆದಿರುತ್ತಾರೆ. ಸೀನಿಯರ್ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಜೈನ್ ವಿದ್ಯಾಲಯ ಶಾಲೆಯ ವಿದ್ಯಾರ್ಥಿಗಳಾದ ಮನೋಜ್ ಹೆಗ್ಗಡೆ ಎಸ್. ಡಿ. ಮತ್ತು ರೋಹಿತ್ ಸಿ. ಎಸ್. ಪಡೆದಿರುತ್ತಾರೆ.

error: Content is protected !!