ಶ್ರದ್ಧಾ ಕೇಂದ್ರಗಳ ಸ್ವಚ್ಚತಾ ಕಾರ್ಯಕ್ಕೆ ಚಾಲನೆ

ಶ್ರದ್ಧಾ ಕೇಂದ್ರಗಳ ಸ್ವಚ್ಚತಾ ಕಾರ್ಯಕ್ಕೆ ಚಾಲನೆ

ಮಲೇಬೆನ್ನೂರಿನ ವೀರಭದ್ರೇಶ್ವರ ದೇವಸ್ಥಾನ ಸ್ವಚ್ಚಗೊಳಿಸಿದ ಧರ್ಮಸ್ಥಳ ಯೋಜನೆಯ ಸಿಬ್ಬಂದಿ

ಮಲೇಬೆನ್ನೂರು, ಆ. 9 –  ಪಟ್ಟಣದ ಹೊರವಲಯದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿಗಳು ಮಂಗಳವಾರ ಸ್ವಚ್ಚಗೊಳಿಸಿದರು. 

ಡಾ. ವೀರೇಂದ್ರ ಹೆಗ್ಗಡೆ ಅವರ ನಿರ್ದೇಶನದಂತೆ ರಾಜ್ಯದಲ್ಲಿ ಇಂದಿನಿಂದ ಇದೇ ದಿನಾಂಕ 14 ರವರೆಗೆ ಎಲ್ಲಾ ಶ್ರದ್ಧಾ ಕೇಂದ್ರ ಗಳನ್ನು ಸ್ವಚ್ಚಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮಲೇಬೆನ್ನೂರು ಯೋಜನಾಧಿಕಾರಿಗಳ ಕಛೇರಿ ವ್ಯಾಪ್ತಿಯಲ್ಲಿ 80ಕ್ಕೂ ಹೆಚ್ಚು ದೇವಸ್ಥಾನ, ಮಸೀದಿ ಮತ್ತು ಚರ್ಚ್‌ಗಳನ್ನು ಸ್ವಚ್ಛ ಮಾಡುವ ಕಾರ್ಯಕ್ಕೆ ಇಂದು ಚಾಲನೆ ನೀಡಿದ್ದೇವೆ ಎಂದು ಮಲೇಬೆನ್ನೂರು ಯೋಜನಾ ಧಿಕಾರಿ ವಸಂತ್‌ ದೇವಾಡಿಗ ತಿಳಿಸಿದರು.

ದೇವಸ್ಥಾನದ ಒಳಗಡೆ ಮತ್ತು ಹೊರಗಡೆ ಹಾಗೂ ಆವರಣದಲ್ಲಿರವ ಬೆಳೆದಿರುವ ಗಿಡ-ಗಂಟೆಗಳನ್ನು ಸ್ವಚ್ಚಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳವಾದ ಬಸ್‌ ನಿಲ್ದಾಣ ಮತ್ತು ಶಾಲೆಗಳನ್ನು ಸ್ವಚ್ಚಗೊಳಿಸುವ ಉದ್ಧೇಶವಿದೆ ಎಂದು ವಸಂತ್‌ ದೇವಾಡಿಗ ಹೇಳಿದರು. 

ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಜಿ. ಮಂಜುನಾಥ್‌ ಪಟೇಲ್‌ ಮಾತನಾಡಿದರು.

ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್‌ ಕಮಿಟಿ ಉಪಾಧ್ಯಕ್ಷ ಬಿ.ಚಿದಾನಂದಪ್ಪ, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಜಿಗಳಿ ಪ್ರಕಾಶ್, ಧರ್ಮಸ್ಥಳ ಯೋಜನೆಯ ಮೇಲ್ವಿಚಾರಕರಾದ ಸಂಪತ್‌ಲಕ್ಷ್ಮಿ, ರಕ್ಷಿತಾ, ಮಾರುತಿ, ಚಂದ್ರಪ್ಪ, ಹರೀಶ್‌, ರಂಗಸ್ವಾಮಿ, ಶಾರದ, ಆಶಾ, ಸವಿತಾ, ರಂಜಿತಾ, ಸಂತೋಷಿನಿ, ಯೋಜನಾ ಕಛೇರಿಯ ಹಣಕಾಸು ಪ್ರಬಂಧಕ ಶ್ರೀಕಾಂತ್‌, ತಾಲ್ಲೂಕು ನೋಡಲ್‌ ಅಧಿಕಾರಿ ಚಿನ್ನಮಾಳ, ಆಡಳಿತ ಪ್ರಬಂಧಕ ರಾಕೇಶ್‌, ಸಿಬ್ಬಂದಿಗಳಾದ ಪೂಜಾ, ರೇಷ್ಮಾ, ಮಂಜುನಾಥ್‌, ಶಿಲ್ಪ, ಅನುಷ, ಭವ್ಯ ಹಾಗೂ ಸೇವಾ ಪ್ರತಿನಿಧಿಗಳು ಮತ್ತು ಕಾರ್ಯಕ್ಷೇತ್ರದ ವಿಎಲ್‌ಇಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಶ್ರಮದಾನ ಮಾಡಿದರು.

error: Content is protected !!