ದುಗ್ಗಾವತಿ ಗ್ರಾ.ಪಂ.ಗೆ ತಳವಾರ ಸಿದ್ದಮ್ಮ ಅಧ್ಯಕ್ಷೆ

ದುಗ್ಗಾವತಿ ಗ್ರಾ.ಪಂ.ಗೆ ತಳವಾರ ಸಿದ್ದಮ್ಮ ಅಧ್ಯಕ್ಷೆ

ಹರಪನಹಳ್ಳಿ, ಆ.8- ದುಗ್ಗಾವತಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ತಳವಾರ ಸಿದ್ದಮ್ಮ ಮೈಲಪ್ಪ ಅವಿರೋಧ ಆಯ್ಕೆ, ಉಪಾದ್ಯಕ್ಷ ಸ್ಥಾನಕ್ಕೆ ಬಣಕಾರ ಬಸಮ್ಮ ಸುರೇಶ ಆಯ್ಕೆ ಯಾಗಿದ್ದಾರೆ.

ಒಟ್ಟು ಸದಸ್ಯರು 11 ಹಾಜರಿದ್ದು, ಅಧ್ಯಕ್ಷ ಸ್ಥಾನಕ್ಕೆ ಟಿ. ಸಿದ್ದಮ್ಮನವರು ಮಾತ್ರ ನಾಮಪತ್ರ ಸಲ್ಲಿಸಿದ್ದರು, ಉಪಾಧ್ಯಕ್ಷ ಸ್ಥಾನಕ್ಕೆ ಬಣಕಾರ ಬಸಮ್ಮ ಹಾಗು ಸಿದ್ದರಾಮಣ್ಣ ನಾಮಪತ್ರ ಸಲ್ಲಿಸಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆದಿದ್ದು, ಬಣಕಾರ ಬಸಮ್ಮನವರು 7 ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾದರು ಎಂದು ಚುನಾವಣಾ ಅಧಿಕಾರಿ ಇಓ ಕೆ.ಆರ್. ಪ್ರಕಾಶ್ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಎಂ.ಎಚ್. ಪರಶುರಾಮ, ಮಂಜುನಾಥ, ಬಣಕಾರ ಮಲ್ಲಿಕಾರ್ಜುನ, ಗುಡಿಗುಡಿ ಪ್ರಕಾಶ, ಟಿ. ತಿಮ್ಮಪ್ಪ, ಜೆ. ವಿಶ್ವನಾಥ, ಸದಸ್ಯ ರಾದ ಎರ್ಚ್, ನಾಗೇಂದ್ರ, ಡಿ. ಪರಶುರಾಮ, ರೇಣುಕಮ್ಮ, ಚಿಗರಿ ಮಂಜುನಾಥ ಸೇರಿದಂತೆ ಇತರರು ಇದ್ದರು.

error: Content is protected !!