ಹರಿಹರ : 250 ಗ್ರಾಂ ಬೆಳ್ಳಿ ದಾನ ಮಾಡಿದ ಶೇರಾಪುರ ರಾಮಪ್ಪಗೆ ಸನ್ಮಾನ

ಹರಿಹರ : 250 ಗ್ರಾಂ ಬೆಳ್ಳಿ ದಾನ ಮಾಡಿದ ಶೇರಾಪುರ ರಾಮಪ್ಪಗೆ ಸನ್ಮಾನ

ಹರಿಹರ, ಅ. 8 – ನಗರದ ಹೊಸಭರಂಪುರ ಬಡಾವಣೆಯ ಶ್ರೀ ಗ್ರಾಮದೇವತೆ ಊರಮ್ಮ ದೇವಿಗೆ 250 ಗ್ರಾಂ ಬೆಳ್ಳಿಯನ್ನು ದಾನ ಮಾಡಿದ ಹಳ್ಳದಕೇರಿ ನಿವಾಸಿ ಶೇರಾಪುರದ ರಾಮಪ್ಪನವರಿಗೆ ಗ್ರಾಮದೇವತೆ ದೇವಸ್ಥಾನ ಸಮಿತಿಯ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಪೂಜಾರ್ ಈರಣ್ಣ, ಪ್ರಧಾನ ಕಾರ್ಯದರ್ಶಿ ಕೆ.ಬಿ. ರಾಜಶೇಖರ, ಉಪಾಧ್ಯಕ್ಷ ಬೆಣ್ಣೆ ರೇವಣಸಿದ್ದಪ್ಪ, ನಿರ್ದೇಶಕರಾದ ಎಂ. ಚಿದಾನಂದ ಕಂಚಿಕೇರಿ, ದಾವಣಗೆರೆ ರುದ್ರೇಶ್, ಹರಪನ ಹಳ್ಳಿ ಬಸವರಾಜಪ್ಪ, ಅರ್ಚಕರು ನಾಗರಾಜ್ ಕೆ. ಕರಿಬಸಪ್ಪ ಇತರರು ಹಾಜರಿದ್ದರು. 

error: Content is protected !!