ಮಹಿಳೆಯರು ಅಣಬೆ ಕೃಷಿಗೆ ಒತ್ತು ಕೊಡಿ

ಮಹಿಳೆಯರು ಅಣಬೆ ಕೃಷಿಗೆ ಒತ್ತು ಕೊಡಿ

ಮಲೇಬೆನ್ನೂರಿನ ಕಾರ್ಯಕ್ರಮದಲ್ಲಿ ರೈತ ಮಹಿಳೆ ಸಾವಿತ್ರಮ್ಮ ಕರೆ

ಮಲೇಬೆನ್ನೂರು, ಆ. 8 – ಪಟ್ಟಣದ ಸಿದ್ಧಾರೂಢ ಆಶ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಸ್ವ-ಉದ್ಯೋಗದಲ್ಲಿ ಕೃಷಿ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಟಾಟಿಸಿದ ಪಶು ವೈದ್ಯಾಧಿಕಾರಿ ಡಾ. ಬಾಲಚಂದ್ರ ಮಾತನಾಡಿ, ಕೃಷಿ ಜೊತೆಗೆ ಹೈನುಗಾರಿಕೆ ಮಾಡುವುದರಿಂದ ಆಗುವ ಪ್ರಯೋಜನಗಳು ಮತ್ತು ಸ್ವ-ಉದ್ಯೋಗಕ್ಕಾಗಿ ಹೈನುಗಾರಿಕೆ ಮಾಡಲು ಸರ್ಕಾರದ ಸೌಲಭ್ಯಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದರು.

ಅಲ್ಲದೇ ಹೈನುಗಾರಿಕೆಯಿಂದ ಎಷ್ಟೆಲ್ಲ ಅನುಕೂಲ ಇವೆ ಎಂಬುದರ ಬಗ್ಗೆಯೂ ಡಾ. ಬಾಲಚಂದ್ರ ತಿಳಿಸಿದರು. ಅಣಬೆ ಕೃಷಿ ಮಹಿಳೆ ಬನ್ನಿಕೋಡಿನ ಶ್ರೀಮತಿ ಸಾವಿತ್ರಮ್ಮ ಅವರು ಅಣಬೆ ಬೇಸಾಯವನ್ನು ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮತ್ತು ವಿಶೇಷವಾಗಿ ಮಹಿಳೆಯರಿಗೆ ತೋರಿಸಿ, ಅಣಬೆ ಕೃಷಿ ಮಹಿಳೆಯರಿಗೆ ಕೃಷಿ ಪೂರಕ ಉದ್ಯೋಗವಾಗಿದೆ ಎಂಬ ಬಗ್ಗೆ ಮಾಹಿತಿ ನೀಡಿದರು. 

ಧರ್ಮಸ್ಥಳ ಯೋಜನೆಯ ಕೃಷಿ ಅಧಿಕಾರಿ ಗಂಗಾಧರ್‌ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯ ಕ್ರಮದ ಉದ್ದೇಶ ತಿಳಿಸಿದರು. ಮೇಲ್ವಿಚಾರಕಿ ಶ್ರೀಮತಿ ಸಂಪತ್‌ಲಕ್ಷ್ಮಿ, ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಚಂದ್ರಮ, ಉಪಾಧ್ಯಕ್ಷೆ ಶ್ರೀಮತಿ ಶಾಂತಮ್ಮ ಮತ್ತು ಷಂತಾಜ್‌, ಶೃತಿ ಸೇರಿದಂತೆ ರೈತ ಮಹಿಳೆಯರು ಸ್ವ-ಸಹಾಯ ಸಂಘಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

error: Content is protected !!