ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಉಳಿಸಬೇಕು

ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಉಳಿಸಬೇಕು

ಹರಪನಹಳ್ಳಿ ಶಾಸಕರಾದ ಎಂ.ಪಿ. ಲತಾ  ಕರೆ

ಹರಪನಹಳ್ಳಿ, ಆ. 8 – ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸುವ ಕಾರ್ಯಕ್ಕೆ ಎಲ್ಲರೂ  ಕೈಜೋಡಿಸಬೇಕು ಎಂದು ಶಾಸಕರಾದ  ಎಂ.ಪಿ. ಲತಾ ಮಲ್ಲಿಕಾರ್ಜುನ ಎಂದು ಹೇಳಿದರು.

ಪಟ್ಟಣದ ಐ.ಬಿ. ವೃತ್ತದಲ್ಲಿ  ಪುರಸಭೆಯವರು ಹಮ್ಮಿಕೊಂಡಿದ್ದ ಏಕ ಬಳಿಕೆ ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ಲಾಸ್ಟಿಕ್ ಮೇಲೆ ಹೆಚ್ಚು ಅವಲಂಬನೆಯಾಗಿರುವ ಕಾರಣ ಸೆವಿಸುವ ಆಹಾರ, ನೀರು, ಗಾಳಿ ಎಲ್ಲವೂ ಮಲಿನ ಆಗುತ್ತಲೇ ಇದೆ. ಮಾನವರ ರಕ್ತದ ಕಣದಲ್ಲಿ ಪ್ಲಾಸ್ಟಿಕ್ ಅಂಶ ಸೇರಿಕೊಂಡು ಮಾರಣಾಂತಿಕ ಕಾಯಿಲೆಗೆ ಕಾರಣ ವಾಗುತ್ತಿದೆ ಹೀಗಾಗಿಯೇ ಕ್ಯಾನ್ಸರ್ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಪ್ರಾಣಿಗಳಿಗೂ ಪ್ಲಾಸ್ಟಿಕ್ ಅಂಶವಿರುವ ಅಹಾರ  ತಿನ್ನಿಸುವ ಕೆಲಸವಾಗುತ್ತಿದ್ದು.  ಉತ್ತಮ ಪರಿಸರದೊಂದಿಗೆ ಆರೋಗ್ಯ ಕಾಪಡಿಕೊಳ್ಳಲು ಪ್ಲಾಸ್ಟಿಕ್ ತ್ಯಜಿಸಿ ಬಟ್ಟೆ ಚೀಲ ಕಾಗದದ ಚೀಲಗಳನ್ನು ಬಳಿಸಿ ಪರಿಸರ ಉಳಿಸಿ ಎಂದು ಮನವಿ ಮಾಡಿದರು.

ಈ ವೇಳೆ  ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ರೇಣುಕಾ ದೇವಿ, ಪುರಸಭೆ ಹಿರಿಯ ಆರೋಗ್ಯ ನಿರಿಕ್ಷಕ ಮಂಜುನಾಥ. ಶ್ಯಾಮರಾಜ್.ಡಾ. ಮಲ್ಕಪ್ಪ ಅಧಿಕಾರ್. ಡಾ. ಕಿಸನ್ ಭಾಗವತ್,ಡಾ. ಸಂಗೀತ, ಡಾ.ಕೆ.ಎಂ. ಖಾನ್. ಜೆ.ಸಿ. ಅಧ್ಯಕ್ಷ ಸಿ. ಪರಶುರಾಮ. ಹೇಮಣ್ಣ ಮೋರಗೇರಿ, ಅಂಬಣ್ಣ ಸೇರಿದಂತೆ ಇತರರು ಇದ್ದರು.

error: Content is protected !!