ರಾಣೇಬೆನ್ನೂರು, ಆ. 4- ಇಲ್ಲಿನ ಶಿವ ವಿವಿಧೋದ್ದೇಶ ಸಹಕಾರಿ ಸೌಹಾರ್ದ ಬ್ಯಾಂಕ್ ಪದಾಧಿಕಾರಿಗಳ ಆಯ್ಕೆ ಇಂದು ನಡೆದಿದ್ದು, ಅಧ್ಯಕ್ಷರಾಗಿ ಜೆ.ಎಸ್.ಕರೇಗೌಡ, ಉಪಾಧ್ಯಕ್ಷರಾಗಿ ಜೆ.ಕೆ. ಗೌಡಶಿವಣ್ಣನವರ ಅವಿರೋಧ ಆಯ್ಕೆಯಾಗಿದ್ದಾರೆ.
ಅಶೋಕ ಗಂಗನಗೌಡ್ರ, ಲೋಕೇಶ ನರಸಗೊಂಡರ, ಕರಬಸಪ್ಪ ಬಣಕಾರ, ಮರಬಸಪ್ಪ ಹೊಂಬರಡಿ, ಜಿ.ಜಿ. ಹೊಟ್ಟಿಗೌಡ್ರ, ರಮೇಶ ಮುದಿಗೌಡ್ರ, ಬಸವರಾಜ ಗೌಡಶಿವಣ್ಣ ನವರ, ಯಶೋಧ ಮುಡದ್ಯಾವಣ್ಣನವರ, ಲಕ್ಷ್ಮಣ ಚಳಗೇರಿ, ಕವಿತಾ ಗೂಳಣ್ಣನವರ, ಮಹ್ಮದಲಿ ಅಸುಂಡಿ, ಶಿವಮೂರ್ತಿ ನಾಯಕ, ಪಕ್ಕೀರಪ್ಪ ಹೊನ್ನಾಳಿ ನಿರ್ದೇಶಕ ಮಂಡಳಿ ಸದಸ್ಯರು.