ಹರಪನಹಳ್ಳಿ, ಆ.4. ತಾಲ್ಲೂಕಿನ ಕುಂಚೂರು ಗ್ರಾಮ ಪಂಚಾಯಿತಿಗೆ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನರವರ ಬೆಂಬಲಿತ ಅಭ್ಯರ್ಥಿ ಕೂಬ್ಯನಾಯ್ಕ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಪಾರ್ವತಮ್ಮ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಅಧ್ಯಕ್ಷ ಸ್ಥಾನಕ್ಕೆ ಕೂಬ್ಯನಾಯ್ಕ ಹಾಗೂ ಎ.ರತ್ನಮ್ಮನವರು ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಪಾರ್ವತಮ್ಮ ಮತ್ತು ಮಲ್ಲಮ್ಮ ನಾಮಪತ್ರ ಸಲ್ಲಿಸಿದ್ದರು.
ಒಟ್ಟು 19 ಸದಸ್ಯರು ಹಾಜರಿದ್ದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೂಬ್ಯನಾಯ್ಕ 13 ಮತಗಳನ್ನು ಪಡೆದಿದ್ದರೆ, ಎ.ರತ್ನಮ್ಮ 6 ಮತ ಪಡೆದು ಪರಾಜಿತರಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪಾರ್ವತಮ್ಮ 12, ಪರಾಜಿತ ಮಲ್ಲಮ್ಮ 7 ಮತಗಳನ್ನು ಪಡೆದಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿ ಎಇಇ ಪ್ರಸನ್ನಕುಮಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ನಾಗರಾಜಪ್ಪ, ಶೌಕತ್, ಎಸ್.ಸೋಮಪ್ಪ, ಸನಾವುಲ್ಲಾ, ವಕೀಲ ಲಕ್ಷ್ಮಣ, ಪಕ್ಕೀರನಾಯ್ಕ, ಷಫಿಸಾಬ್, ಇಮಾಮ್ಸಾಬ್, ಕೆ.ಸುಮಯ, ರತ್ನಮ್ಮ, ಮಾಬುಸಾಬ್, ಚಂದ್ರಮ್ಮ ಎಂ ಅರಸನಾಳು, ಮಂಜಪ್ಪ, ಮಲ್ಲಪ್ಪ, ಬಿ.ಮಂಜುಳಾ, ಎಸ್.ಕೊಟ್ರೇಶ್, ಎಚ್.ಸಿದ್ದಲಿಂಗಪ್ಪ, ಮಹೇಶನಾಯ್ಕ, ಸೇರಿದಂತೆ ಇತರರು ಇದ್ದರು.