ದಾವಣಗೆರೆ, ಆ.4- ಕರುನಾಡ ಸಮರ ಸೇನೆ ಸಂಘಟನೆಯ ರಾಜ್ಯ ವರ್ತಕರ ಘಟಕದ ಅಧ್ಯಕ್ಷರಾಗಿ ಕಿರಣ್ ಕುಮಾರ್ ಬಿ.ಎಂ. (ಬಾಳೆಹೊಲದ) ಆಯ್ಕೆಯಾಗಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಈ ಆಯ್ಕೆ ಅವಿರೋಧವಾಗಿ ನಡೆಯಿತು. ಈ ಸಂದರ್ಭದಲ್ಲಿ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಐಗೂರು ಸುರೇಶ್, ಕಾಕೋಳ್ ಹನುಮಂತಗೌಡರು, ಗೌರವ ಅಧ್ಯಕ್ಷ ತಾನೋಜಿರಾವ್ ಮತ್ತಿತರರು ಉಪಸ್ಥಿತರಿದ್ದರು.