ದಾವಣಗೆರೆ, ಆ. 4 – ನಗರದ ಅಕ್ಷಯ ಟಿವಿಎಸ್ ಷೋ ರೂಂನಲ್ಲಿ 25 ಹೊಸ ಐಕ್ಯೂಬ್ ಎಲೆಕ್ಟ್ರಿಕ್ ಸ್ಮಾರ್ಟ್ ಸ್ಕೂಟರ್‌ಗಳನ್ನು ಇಂದು ಗ್ರಾಹಕರಿಗೆ ವಿತರಿಸಲಾಯಿತು.
ಮಾರುಕಟ್ಟೆಯಲ್ಲಿ ಇತ್ತೀಚೆಗೆ ಪರಿಚಯಿಸಿದ್ದರೂ ಕಡಿಮೆ ಸಮಯದಲ್ಲಿಯೇ ಜನಪ್ರಿಯವಾಗಿರುವ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಗ್ರಾಹಕರು ಉತ್ಸಾಹದಿಂದ ಖರೀದಿಸಿದರು. ಈ ಸಂದರ್ಭದಲ್ಲಿ ಅಕ್ಷಯ ಟಿವಿಎಸ್ ಡೀಲರ್ ಶಿಪ್ ಮಾಲೀಕ ಎಸ್. ಭಾನು ಪ್ರಕಾಶ್, ಟಿವಿಎಸ್ ಕಂಪನಿಯ ಕರ್ನಾಟಕ ಏರಿಯಾ ಸರ್ವಿಸ್ ಮ್ಯಾನೇಜರ್ ಜಿ. ವಸಂತ್ ಕುಮಾರ್, ಟೆರಿಟರಿ ಸರ್ವಿಸ್ ಮ್ಯಾನೇಜರ್ ಝೀಷಾನ್ ಹಾಗೂ ದಾವಣಗೆರೆ ಶಾಖೆಯ ವ್ಯವಸ್ಥಾಪಕ ಸಂಜೀವ್ ಅವರುಗಳು ಉಪಸ್ಥಿತರಿದ್ದು, ಹೊಸ ದ್ವಿಚಕ್ರ ವಾಹನದ ಕೀಗಳನ್ನು ಗ್ರಾಹಕರಿಗೆ ಹಸ್ತಾಂತರಿಸಿದರು.