ಹರಿಹರ, ಆ.4 – ತುಂಗಭದ್ರಾ ನದಿಯಲ್ಲಿ ತಾಲ್ಲೂಕಿನ ಮೂಗಿನಗುಂದಿ ಗ್ರಾಮದ ತಾಯಿ ಹಾಗೂ ಮಗಳು ಮುಳುಗಿ ಮೃತಪಟ್ಟ ಘಟನೆ ನಿನ್ನೆ ನಡೆದಿದೆ. ಆನಂದ್ ಪತ್ನಿ ಭಾಗ್ಯಜೋತಿ (40) ಹಾಗೂ ಮಗಳು ವೇದಿಕಾ (9) ವರ್ಷದ ತಾಯಿ ಮತ್ತು ಮಗಳು ನೀರಿನಲ್ಲಿ ಸಾವಿಗೀಡಾಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಈಜು ಪರಿಣಿತರು ಮೃತದೇಹ ಹೊರ ತಂದಿದ್ದಾರೆ.
ಸ್ಥಳಕ್ಕೆ ಪಿಎಸ್ಐ ದೇವಾನಂದ್, ಅಗ್ನಿಶಾಮಕ ಠಾಣೆ ಪಿಎಸ್ಐ ಸಂಜೀವ ಕುಮಾರ್ ಮತ್ತಿತರರು ಭೇಟಿ ನೀಡಿದ್ದರು.