`ಶ್ರಾವಣ ಸಂಭ್ರಮ-2023′ ನಾಡಿದ್ದು ಬಿಎಸ್‌ಸಿಯಲ್ಲಿ ಡಬಲ್ ಡಿಸ್ಕೌಂಟ್

ದಾವಣಗೆರೆ, ಆ. 3- `ಶ್ರಾವಣ ಸಂಭ್ರಮ -2023′ ದ ಅಂಗವಾಗಿ ಆ. 6 ರಿಂದ 31 ರವರೆಗೆ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ ಅಂಗಡಿಯಲ್ಲಿ ಡಬಲ್ ಡಿಸ್ಕೌಂಟ್ ನೀಡಲಾಗುವುದು (ಶೇ. 10 + 10 ರಿಯಾಯತಿ) ಎಂದು ಮಾಲೀಕರಾದ ಬಿ.ಸಿ. ಚಂದ್ರಶೇಖರ್ ಹಾಗೂ ಬಿ.ಸಿ. ಶಿವ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಯನ ಮನೋಹರವಾದ ಸೀರೆಗಳು, ಲೇಡೀಸ್ ವೇರ್, ಮೆನ್ಸ್‌ವೇರ್, ಮಕ್ಕಳ ರೆಡಿಮೇಡ್ ಹಾಗೂ ಇತರೆ ನವನವೀನ ಬಟ್ಟೆಗಳ ಮೆಲೆ ರಿಯಾಯತಿ ಜೊತೆಗೆ ವಿಶೇಷ ರಿಯಾಯತಿ ನೀಡುವುದಾಗಿ ಹೇಳಿದರು.

ವರ್ಷಕ್ಕೊಮ್ಮೆ ಮಾತ್ರ ಈ ರೀತಿ ಡಬಲ್ ಡಿಸ್ಕೌಂಟ್‌ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್‌ನ ಎಲ್ಲಾ ಅಂಗಡಿಗಳಲ್ಲಿ ನೀಡಲಾಗು ವುದು. ನಮ್ಮ ಪ್ರತಿ ಅಂಗಡಿಯಲ್ಲೂ ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡಿ, ಯೋಗ್ಯ ಬೆಲೆಗೆ ಗುಣಮಟ್ಟದ ಬಟ್ಟೆಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಭಾರತದಲ್ಲಿ ಸಿಗುವ ಎಲ್ಲಾ ರೀತಿಯ ಡಿಸೈನ್ ಸೀರೆಗಳು, ಇನ್ನಿತರೆ ವಸ್ತ್ರಗಳನ್ನು ಸಹ ನಮ್ಮ ಅಂಗಡಿಯಲ್ಲಿ ಮಾರಾಟ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು. 

error: Content is protected !!