ಮಣಿಪುರದ ಕೋಮು ಗಲಭೆಗೆ ಕ್ರಿಶ್ಚಿಯನ್‌ ಪರಿಷತ್‌ ಖಂಡನೆ

ಮಣಿಪುರದ ಕೋಮು ಗಲಭೆಗೆ ಕ್ರಿಶ್ಚಿಯನ್‌ ಪರಿಷತ್‌ ಖಂಡನೆ

ದಾವಣಗೆರೆ, ಆ.1- ಮಣಿಪುರದಲ್ಲಿ ನಡೆಯುತ್ತಿರುವ ಗಲಭೆಗಳನ್ನು ನಿಯಂತ್ರಿಸಿ, ಕ್ರೈಸ್ತ ಸಮುದಾಯಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಜಿಲ್ಲಾ ಕ್ರಿಶ್ಚಿಯನ್‌ ಪರಿಷತ್‌ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಪರಿಷತ್‌ ವತಿಯಿಂದ ಪ್ರತಿಭಟನೆ ನಡೆಸಿ ಕೂಡಲೇ ಮಣಿಪುರ ರಾಜ್ಯ ಮತ್ತು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ, ಹಿಂಸಾಚಾರ-ಕೋಮು ಗಲಭೆ ನಿಯಂತ್ರಣಕ್ಕೆ ತರುವಂತೆ ಆಗ್ರಹಿಸಲಾಯಿತು.

ಇದುವರೆಗೂ 160 ಕ್ಕಿಂತಲೂ ಹೆಚ್ಚು ಜನರ ಕೊಲೆಗಳಾಗಿವೆ. ಸುಮಾರು 300 ಚರ್ಚ್‌ಗಳು ಸುಡಲ್ಪಟ್ಟಿವೆ. 

7000 ಕ್ಕಿಂತಲೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಲ್ಪಟ್ಟಿವೆ. ಕ್ರೈಸ್ತರಿರುವ ಹಳ್ಳಿಗಳಿಗೆ ಕಿಡಿಗೇಡಿಗಳು ನುಗ್ಗಿ ಬೆಂಕಿ ಹಚ್ಚಿ ಜನರನ್ನು ಹಿಂಸಿಸಿ ಕೊಲೆ, ಅತ್ಯಾಚಾರಗಳಾಗಿವೆ ಹಾಗೂ ಜನರು ಮನೆಗಳನ್ನು ಕಳೆದುಕೊಂಡು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ.

ಭಾನುವಾರದ ಪ್ರಾರ್ಥನೆಯನ್ನು ಬೀದಿಗಳಲ್ಲಿ ಮಾಡುತ್ತಿದ್ದಾರೆ ಹಾಗೂ ಕಾಡು-ಗುಡ್ಡಗಳಲ್ಲಿ ಭಯದ ವಾತಾವರಣದಲ್ಲಿ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಕೂಡಲೇ ಕ್ರೈಸ್ತ ಸಮುದಾಯಕ್ಕೆ ನ್ಯಾಯ ಒದಗಿಸಿ,  ಧಾರ್ಮಿಕ ಸಭೆಗಳಿಗೆ ಪುನರ್ವಸತಿ ಕಲ್ಪಿಸಿಕೊಡಬೇಕೆಂದು ಮನವಿಯಲ್ಲಿ ಕೋರಲಾಗಿದೆ.

ಈ ಸಂದರ್ಭದಲ್ಲಿ ಫಾಸ್ಟರ್‌ ಪ್ರೇಮ್‌ ಕುಮಾರ್‌, ರವಿಕುಮಾರ್‌, ಜಾನ್‌ ಬಾಬು, ಕರುಣಾಕರನ್‌, ಪೀಟರ್‌ ಬಾಬು, ಮೋಸದ್‌ ಅಮನ್ನಿ, ಇನ್‌ಗೊಂ, ಡೆನ್ಸಿಲ್‌, ಬುನಿಯನ್‌ ಸಾಮಿತ್ರ, ದಾದುಸೇಠ್‌, ಚಮನ್‌ಸಾಬ್‌, ಇಮ್ರಾನ್‌ ರಾಜಾ, ಎಸ್‌.ಕೆ. ಅಮ್ಜದ್‌, ಶಂಶುದ್ದೀನ್‌ ಭಾಗವಹಿಸಿದ್ದರು.

error: Content is protected !!