ಮಲೇಬೆನ್ನೂರು, ಆ.1- ಕುಂಬಳೂರು ಗ್ರಾಮದ ಹೊರ ವಲಯದಲ್ಲಿರುವ ಚಿಟ್ಟಕ್ಕಿ ಇಂಟರ್ನ್ಯಾಷನಲ್ ಸ್ಕೂಲ್ಗೆ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರು ಭೇಟಿ ನೀಡಿ ಶಾಲೆಯ ವ್ಯವಸ್ಥೆ ಹಾಗೂ ಕಲಿಕಾ ವಿಧಾನ ಮತ್ತು ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಸಚಿವರನ್ನು ಎಸ್ಡಿಎಲ್ ವಿದ್ಯಾಸಂಸ್ಥೆ ಅಧ್ಯಕ್ಷ ಚಿಟ್ಟಕ್ಕಿ ರಮೇಶ್, ಕಾರ್ಯದರ್ಶಿ ಮಹಾಂತೇಶ್ ಸ್ವಾಮಿ, ಆಡಳಿತಾಧಿಕಾರಿ ಎಸ್.ಕೆ. ಕುಮಾರ್ ಅವರು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿದರು.
ಮುದೇಗೌಡ್ರು ಗಿರೀಶ್, ಬೇತೂರು ಕರಿಬಸಪ್ಪ, ಮಾಗಾನಹಳ್ಳಿ ಪರಶುರಾಮ್, ಜಿಗಳಿ ಆನಂದಪ್ಪ, ಕೊಕ್ಕನೂರು ಸೋಮಶೇಖರ್, ಚಿಟ್ಟಕ್ಕಿ ನಾಗರಾಜ್, ಪೊಲೀಸ್ ಮಂಜು, ದಡ್ಡಿ ಅನಿಲ್, ಶಫೀ, ಕುಂಬಳೂರಿನ ಸಂತೋಷ್, ಜಿಗಳಿಯ ಕೆ.ಜಿ. ಬಸವರಾಜ್ ಸೇರಿದಂತೆ, ಶಾಲಾ ಶಿಕ್ಷಕರು ಈ ವೇಳೆ ಹಾಜರಿದ್ದರು.