ಮಳೆಗೆ ಬೆಳೆ ಹಾನಿ: ಪರಿಹಾರಕ್ಕೆ ಜೆಡಿಎಸ್ ಒತ್ತಾಯ

ಮಳೆಗೆ ಬೆಳೆ ಹಾನಿ: ಪರಿಹಾರಕ್ಕೆ ಜೆಡಿಎಸ್ ಒತ್ತಾಯ

ರಾಣೇಬೆನ್ನೂರು, ಆ.1-ಕಳೆದ ವಾರ ಸುರಿದ ಸತತ ಮಳೆಯಿಂದ ಬೆಳೆ ಕಳೆದುಕೊಂಡ ರೈತರು, ಮನೆ ಕಳೆದುಕೊಂಡ ಬಡವರು ಬಹಳ ಸಂಕಷ್ಟಕ್ಕೀಡಾಗಿದ್ದು, ಸರ್ಕಾರ ಅವರಿಗೆ ಶೀಘ್ರ ಪರಿಹಾರ ನೀಡಬೇಕು ಎಂದು ಜೆಡಿಎಸ್ ಮುಖಂಡ ಮಂಜು ನಾಥ ಗೌಡಶಿವಣ್ಣನವರ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಸುಮಾರು 87 ಹಳ್ಳಿಗಳಲ್ಲಿ ಹಾಗೂ ನಗರದ ಜಮೀನುಗಳಲ್ಲಿ ನೀರು ನಿಂತಿದ್ದರಿಂದ 9565 ಎಕರೆ ಗೋವಿನ ಜೋಳ, 100 ಎಕರೆ ಹತ್ತಿ, 200 ಎಕರೆ ಬೆಳ್ಳುಳ್ಳಿ, 50 ಎಕರೆಯಷ್ಟು ಅವರೆ ಬೆಳೆ ನಾಶವಾಗಿದೆ ಎಂಬುದನ್ನು ಚಿತ್ರಿಸಿದ  ಫೋಟೊ ಹಾಗೂ ವಿಡಿಯೋಗಳನ್ನು ತಹಶೀಲ್ದಾರ್‌ರಿಗೆ  ಸಲ್ಲಿಸಿ, ರೈತರು ಎಕರೆಗೆ ಸುಮಾರು 15 ಸಾವಿರದಷ್ಟು ಖರ್ಚು ಮಾಡಿದ್ದು, ಅವರಿಗೆ ಶೀಘ್ರವೇ ಪರಿಹಾರ ಕೊಡುವಂತೆ ಒತ್ತಾಯಿಸಿದರು.

ಅನ್ಯಾಯಕ್ಕೊಳಗಾಗಿರುವ ಜನರಿಗೆ ತೀವ್ರ ಪರಿಹಾರ ಕೊಡದಿದ್ದರೆ ಜೆಡಿಎಸ್ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಹೇಳಿದ ಗೌಡಶಿವಣ್ಣನವರ ಜೊತೆಗೆ ಎಂ.ಬಿ.ಮಹೇಶಚಾರಿ, ಮಹೇಶ ಹೊನ್ನಜ್ಜಿ, ಸಿದ್ದಪ್ಪ ದುರ್ಗದ, ಕೃಷ್ಟ ಲಮಾಣಿ,ರಮೇಶ ಗಡ್ಡದಗೂಳಿ, ಮಳ್ಳಪ್ಪ ಪೂಜಾರ, ಎಸ್.ಡಿ. ಮಾಲತೇಶ ಮತ್ತಿತರರಿದ್ದರು.

error: Content is protected !!