ಸಂಗೀತ ಪದವಿಗೆ ಡಾ. ಗಂಗೂಬಾಯಿ ಹಾನಗಲ್ ವಿವಿಯ ಮಾನ್ಯತೆ

ದಾವಣಗೆರೆ,  ಆ.1- ಭಾರತೀಯ ಪರಂಪರೆ, ಸಂಸ್ಕೃತಿಯಲ್ಲಿ ಸಂಗೀತ ಶ್ರೇಷ್ಠ  ಕಲೆಯಾಗಿದ್ದು, ಸಂಗೀತ ಕ್ಷೇತ್ರದಲ್ಲಿ ಪದವಿ ಪರೀಕ್ಷೆ ನಡೆಸಲು ಮಹತೀ ಸಾಂಸ್ಕೃತಿಕ ಕಲಾ ಸಂಸ್ಥೆಗೆ ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದಿಂದ ಮಾನ್ಯತೆ ದೊರೆತಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಎಂ. ದ್ವಾರಕೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2023-24 ನೇ ಸಾಲಿನಿಂದ ಸಂಗೀತ ಕ್ಷೇತ್ರದಲ್ಲಿ ಸರ್ಟಿಫಿಕೇಟ್ ಕೋರ್ಸ್ ಆಫ್ ಮ್ಯೂಸಿಕ್, ಡಿಪ್ಲೋಮಾ ಕೋರ್ಸ್ ಇನ್ ಮ್ಯೂಸಿಕ್, ಬಿಪಿಎ (ಬ್ಯಾಚುಲರ್ ಇನ್ ಪರ್‌ಫಾರ್ಮಿಂಗ್ ಆರ್ಟ್ (ಮ್ಯೂಸಿಕ್))ಪದವಿ ಪರೀಕ್ಷೆಗಳನ್ನು ನಡೆಸಲು ಅನುಮತಿ ದೊರೆತಿದೆ ಎಂದರು.

ಸಂಗೀತ ಕ್ಷೇತ್ರದಲ್ಲಿ ಇದುವರೆಗೂ ಪದವಿ ಪಡೆಯುವ ಅವಕಾಶ ಇರಲಿಲ್ಲ. ಈಗ ದಾವಣಗೆರೆಯಲ್ಲಿ ಬಿ. ಮ್ಯೂಸಿಕ್, ಎಂ.ಮ್ಯೂಸಿಕ್ ಕಲಿಕೆಗೂ ಅವಕಾಶ ನೀಡಲಾಗಿದೆ. ಅಧ್ಯಯನ ಕೇಂದ್ರಗಳ ಮೂಲಕ ಸಂಗೀತದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆಯಲು ಸಂಗೀತಾಸಕ್ತರಿಗೆ ಅವಕಾಶ ಸಿಗಲಿದೆ. ಮೊದಲು ಪದವಿ  ಕೋರ್ಸ್, ಮುಂದಿನ ದಿನಗಳಲ್ಲಿ ಸ್ನಾತಕೋತ್ತರ ಪದವಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಸಂಗೀತ ವಿವಿ ಕುಲಪತಿ ಪ್ರೊ.ನಾಗೇಶ್ ವಿ. ಬೆಟ್ಟಕೋಟಿ, ಕುಲಸಚಿವ ಪ್ರೊ.ಟಿ.ಎಸ್. ದೇವರಾಜ್ ಅವರು ಸಂಗೀತ ಕ್ಷೇತ್ರದ ಮಹತ್ವವನ್ನು ರಾಜ್ಯದೆಲ್ಲೆಡೆ ಪಸರಿಸಬೇಕೆಂಬ ಮಹತ್ವಾಕಾಂಕ್ಷೆಯ ಫಲವಾಗಿ ಇಂದು ರಾಜ್ಯಾದ್ಯಂತ ವಿವಿ ಮಾನ್ಯತೆಯೊಂದಿಗೆ ಸಂಗೀತ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿ ಸಂಗೀತಾಸಕ್ತರಿಗೆ ಯುಜಿಸಿ ಮಾರ್ಗದರ್ಶನದಲ್ಲಿ ಪರಿಪೂರ್ಣ ಗುಣಮಟ್ಟದ ಶಿಕ್ಷಣವನ್ನು ನೀಡಲು ಉದ್ದೇಶಿಸಿ, ರಾಜ್ಯದ ಹಲವಾರು ಸಂಗೀತ ಶಿಕ್ಷಣ ಸಂಸ್ಥೆಗಳಿಗೆ ಸಂಗೀತ ಅಧ್ಯಯನ ಕೇಂದ್ರಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಹೆಚ್ಚಿನ ವಿವರಗಳಿಗೆ 9448872944, 9986044145 ಗೆ ಸಂಪರ್ಕಿಸಲು ಕೋರಿದರು. ಪತ್ರಿಕಾಗೋಷ್ಠಿಯಲ್ಲಿ ಸವಿತಾ ಕೂಲಂಬಿ, ಹರ್ಷ ಪುರೋಹಿತ್, ನಾಗಶ್ರೀ ಉಪಸ್ಥಿತರಿದ್ದರು. 

error: Content is protected !!