ಶಿಥಿಲಗೊಂಡಿರುವ ಹರಿಹರ ನಗರಸಭೆ ಮಳಿಗೆಗಳು

ಶಿಥಿಲಗೊಂಡಿರುವ ಹರಿಹರ ನಗರಸಭೆ ಮಳಿಗೆಗಳು

9 ವರ್ಷದಿಂದ ದುರಸ್ತಿ ಇಲ್ಲ, ಅಪಾಯಕಾರಿ ಸ್ಥಳದಲ್ಲಿಯೇ ವಹಿವಾಟು

ಹರಿಹರ, ಜು. 31 – ನಗರದ ಹೃದಯಭಾಗದಲ್ಲಿರುವ ಐ.ಡಿ.ಐ. ಎಸ್.ಎಂ.ಟಿ. ಕಟ್ಟಡ ರಸ್ತೆ ಅಗಲೀ ಕರಣದ ವೇಳೆ ಹಾನಿಗೆ ಗುರಿಯಾಗಿದೆ. ಒಂಭತ್ತು ವರ್ಷಗಳಿಂದ ದುರಸ್ತಿ ಕಾರಣದೇ ಸಂಪೂರ್ಣ ಶಿಥಿಲವಾ ಗಿದೆ. ಆದರೂ, ಇಲ್ಲಿ ವಹಿವಾಟು ನಡೆಸಲು ಅವಕಾಶ ನೀಡಿರುವುದು ಅಪಾಯಕಾರಿಯಾಗಿದೆ.

1993ರಲ್ಲಿ ಎರಡು ಅಂತಸ್ತಿನ ವಾಣಿಜ್ಯ ಸಂಕೀರ್ಣವನ್ನು ಕಟ್ಟಲಾ ಗಿತ್ತು. ನೆಲಮಹಡಿಯಲ್ಲಿ 35 ಮಳಿಗೆ ಹಾಗೂ ಒಂದನೇ ಅಂತಸ್ತಿನಲ್ಲಿ ಮೂರು ಬೃಹತ್ ಮಳಿಗೆಗಳನ್ನು ನಿರ್ಮಿಸಲಾಗಿತ್ತು. ನಗರದ ಹೃದಯ ಭಾಗದಲ್ಲಿರುವ ಈ ಕಟ್ಟಡದ ಮಳಿಗೆ ಗಳಿಗೆ ಹೆಚ್ಚಿನ ಬೇಡಿಕೆಯೂ ಇತ್ತು. ಆದರೆ, 2014ರಲ್ಲಿ ರಸ್ತೆ ಅಗಲೀಕರಣಕ್ಕಾಗಿ ಕಟ್ಟಡದ ಒಂದು ಭಾಗ ನೆಲಸಮ ಮಾಡಲಾಯಿತು. ಕೆಲ ಮಳಿಗೆಗಳು ಅರ್ಧ ಭಾಗ ಮಾತ್ರ ತೆರವಾಗಿದ್ದವು. ಅವುಗಳನ್ನು ಇದುವರೆಗೂ ದುರಸ್ತಿ ಮಾಡಿಲ್ಲ. ಈ ಕಟ್ಟಡ ಒಂದು ರೀತಿ ಭೂತ ಬಂಗಲೆಯ ಸ್ವರೂಪ ಪಡೆದು ಕೊಂಡಿದೆ. ಕಟ್ಟಡದ ಮೇಲ್ಭಾಗದಲ್ಲೂ ಸಾಕಷ್ಟು ಗಿಡಗಳು ಬೆಳೆದು ಪಾಚಿ ಕಟ್ಟಿಕೊಂಡಿದೆ. ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ.

ಶಿಥಿಲಗೊಂಡಿರುವ ಹರಿಹರ ನಗರಸಭೆ ಮಳಿಗೆಗಳು - Janathavani

ಕೆಲ ಬಾಡಿಗೆದಾರರು ಶಿಥಿಲವಾದ ಅರೆಬರೆ ಮಳಿಗೆಗಳಲ್ಲೇ ವ್ಯಾಪಾರ ಮಾಡುತ್ತಿದ್ದಾರೆ. ಹಣ್ಣು, ತಿನಿಸುಗಳು ಇತ್ಯಾದಿ ಅಂಗಡಿಗಳು ಈ ಮಳಿಗೆಗಳಲ್ಲಿವೆ. ಇಲ್ಲಿನ ಮಳಿಗೆಗಳಿಂದ ಬಾಡಿಗೆ ರೂಪದಲ್ಲಿ ನಗರಸಭೆಗೆ ತಿಂಗಳಿಗೆ 1 ಲಕ್ಷದ 10 ಸಾವಿರ ರೂಪಾಯಿ ಹಣ ಹರಿದು ಬರುತ್ತದೆ. ಆದರೆ, ಶಿಥಿಲವಾಗಿರುವ ಅರೆ ಬರೆ ಮಳಿಗೆಗಳಿಂದ ಎಷ್ಟು ಬಾಡಿಗೆ ಬರುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ.

ಈ ಕಟ್ಟಡವನ್ನು ದುರಸ್ತಿ ಮಾಡಿದರೆ ವ್ಯಾಪಾರಸ್ಥರು ಹಾಗೂ ಜನರಿಗೆ ಸುರಕ್ಷತೆ ಸಿಗಲಿದೆ. ನಗರಸಭೆಗೆ ಇನ್ನೂ ಹೆಚ್ಚಿನ ಆದಾಯ ಬರಲಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕಿದೆ.

error: Content is protected !!