ಗುರುಸಿದ್ದಯ್ಯ, ನಿಶಾನಿಮಠ ನೇತೃತ್ವದಲ್ಲಿ ಅವಿರೋಧ ಆಯ್ಕೆ
ದಾವಣಗೆರೆ, ಜು.31- ನಗರದ ಪ್ರತಿಷ್ಠಿತ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಗೆ ನಡೆದ ಚುನಾವಣೆ ಯಲ್ಲಿ ಬ್ಯಾಂಕಿನ ಹಾಲಿ ಅಧ್ಯಕ್ಷ ಎನ್.ಜೆ. ಗುರುಸಿದ್ದಯ್ಯ ಮತ್ತು ಹಾಲಿ ಉಪಾಧ್ಯಕ್ಷ ಎನ್.ಎಂ.ನಿರಂಜನಮೂರ್ತಿ ನಿಶಾನಿಮಠ ಅವರುಗಳ ನೇತೃತ್ವದಲ್ಲಿ ಎಲ್ಲಾ 12 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.
ಎನ್.ಜೆ.ಗುರುಸಿದ್ದಯ್ಯ ಮತ್ತು ನಿರಂಜನಮೂರ್ತಿ ನಿಶಾನಿಮಠ ಅವರುಗಳೂ ಸೇರಿದಂತೆ, ಕೆ.ಎಸ್.ಮಹೇಶ್ವರಪ್ಪ, ಬಿ.ಹೆಚ್.ಪರಶುರಾಮಪ್ಪ, ವಿಕಾಸ್ ಕುಮಾರ್, ಎನ್.ವಿ.ಬಂಡಿವಾಡ, ಕೆ.ಆರ್.ರವೀಂದ್ರನಾಥ್, ಶ್ರೀಮತಿ ಪಂಕಜ ವೀರಯ್ಯ, ಶ್ರೀಮತಿ ಆರ್.ಕೌಶಲ್ಯ, ಶ್ರೀಮತಿ ಲತಾ ಹಾಲೇಶ್, ಹೆಚ್.ವಿ.ವಿರುಪಾಕ್ಷ ಮತ್ತು ಅಭಿಷೇಕ್ ಬೇತೂರು ನಿರ್ದೇಶಕರುಗಳಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬರುವ ಆಗಸ್ಟ್ 5 ರಂದು ನಿಗಧಿಯಾಗಿದ್ದ ಚುನಾವಣೆಯು, ಎಲ್ಲಾ ಸ್ಥಾನಗಳೂ ಅವಿರೋಧ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣೆ ಇರುವುದಿಲ್ಲ ಎಂದು ಸಹಕಾರ ಸಂಘಗಳ ಸಹಕಾರ ಅಭಿವೃದ್ಧಿ ಅಧಿಕಾರಿಯೂ ಆಗಿರುವ ಚುನಾವಣಾಧಿಕಾರಿ ಜಿ.ಎಸ್.ಸುರೇಂದ್ರ ತಿಳಿಸಿದ್ದಾರೆ.