ಹರಪನಹಳ್ಳಿ, ಜು.30- ತಾಲ್ಲೂಕಿನ ಅರಸೀಕೆರೆ ಗ್ರಾಮೀಣ ಭಾಗದ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಿ, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕಾದ ಅಗತ್ಯವಿದೆ ಎಂದು ಡಾ.ರವಿ ಕುಮಾರ್ ಹೇಳಿದರು.
ಹೋಬಳಿಯ ಜಂಗಮ ತುಂಬಿಗೆರೆ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಭಾನುವಾರ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದ ಜನರಿಗೆ ಉದ್ಭವಿಸುವ ಆರೋಗ್ಯ ಸಮಸ್ಯೆಗೆ ದೂರದ ಪಟ್ಟಣಗಳಲ್ಲಿನ ಆಸ್ಪ ತ್ರೆಯ ಮಾಹಿತಿ ಕೊರತೆ ಇರುತ್ತದೆ. ಈ ನಿಟ್ಟಿ ನಲ್ಲಿ ಸಮಾಜ ಸೇವಕರು, ಸಂಘ-ಸಂಸ್ಥೆಗಳು, ಆರೋಗ್ಯ ಶಿಬಿರ ಆಯೋಜಿಸಿ, ರೋಗ ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದರು.
ಶಿಬಿರದಲ್ಲಿ ರಕ್ತದೊತ್ತಡ, ದಂತ, ಮಧುಮೇಹ, ಕೀಲು ಮೂಳೆ, ಹೃದಯ ಸಂಬಂಧಿ ಕಾಯಿಲೆಗಳ ತಪಾಸಣೆ ನಡೆಸಲಾಯಿತು. ಅಗತ್ಯ ಇರುವ ರೋಗಿಗಳಿಗೆ ಉಚಿತ ಔಷಧ ವಿತರಣೆ ಮಾಡಲಾಯಿತು.
ಗ್ರಾಮ ಪಂಚಾಯತಿ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 20 ಯೂನಿಟ್ ರಕ್ತ ಸಂಗ್ರಹವಾಗಿದೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಗುರುಸಿದ್ದನ ಗೌಡ, ವೈದ್ಯರಾದ ಡಾ.ಶಾಹೀದ್, ಹಾಲಸ್ವಾಮಿ ಕಂಬಳಿ ಮಠ, ಸುದ ರ್ಶನ್, ನಿಖಿಲ್, ಟಿ.ಶಿವಣ್ಣ, ನಾಗರಾಜ್, ಸಿದ್ದಪ್ಪ ಹಾಗು ಇತರರು ಇದ್ದರು.