ಜಿಎಂಐಟಿ : 610 ವಿದ್ಯಾರ್ಥಿಗಳು ಕಂಪನಿಗಳಿಗೆ ಆಯ್ಕೆ

ದಾವಣಗೆರೆ, ಜು.30- ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ 2023ರ ಸಾಲಿನ ಒಟ್ಟು 610 ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಸಂಜಯ್ ಪಾಂಡೆ ಎಂ.ಬಿ. ತಿಳಿಸಿದ್ದಾರೆ. 

ಕೆಲವು ಸಾಫ್ಟ್‌ವೇರ್ ದೈತ್ಯ ಕಂಪನಿಗಳು ಆರ್ಥಿಕ ಹಿಂಜರಿತದಿಂದ 2023 ನೇ ಸಾಲಿನ ಐಟಿ ವಿದ್ಯಾರ್ಥಿಗಳಿಗೆ ನೇಮಕಾತಿ ನಿರ್ಬಂಧಿಸಿದ್ದವು. ಇಂತಹ ಪರಿಸ್ಥಿತಿ ಯಲ್ಲೂ ಇತರೆ ಪ್ರತಿಷ್ಠಿತ ಕಂಪನಿಗಳಾದ ಸೋನಾಟಾ ಸಾಫ್ಟ್‌ವೇರ್, ಮರ್ಸಿಡೆಸ್ ಬೆನ್ಸ್, ಎಕ್ಸಾವೇರ್ ಟೆಕ್ನಾಲಜೀಸ್, ಟೆಕ್ ಮಹೇಂದ್ರ, ರೋಬೋ ಸಾಫ್ಟ್ ಟೆಕ್ನಾಲಜೀಸ್, ಕ್ವಾಲಿಟೆಸ್ಟ್, ಇಂಟೆಲಿಪಾತ್ ಸಾಫ್ಟ್‌ವೇರ್, ಎಸ್.ಎಲ್. ಕೆ. ಸಾಫ್ಟ್‌ವೇರ್ ಸರ್ವೀಸಸ್ ಮುಂತಾದ ಹಲವು ಸಾಫ್ಟ್‌ವೇರ್ ಕಂಪನಿಗಳು ಸಂದ ರ್ಶನ ಪ್ರಕ್ರಿಯೆ ನಡೆಸಿ, ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿವೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ತೇಜಸ್ವಿ ಕಟ್ಟಿಮನಿ ಟಿ.ಆರ್. ತಿಳಿಸಿದ್ದಾರೆ. 

ವಿದ್ಯಾರ್ಥಿಗಳ ತಾಂತ್ರಿಕ ಗುಣಮಟ್ಟ ಹೆಚ್ಚಿಸಲು ಅನೇಕ ತರಬೇತಿ ಸಂಸ್ಥೆಗಳ ಮತ್ತು ಕೈಗಾರಿಕೆಗಳೊಡನೆ ಒಡಂಬಡಿಕೆ ಮಾಡಿಕೊಂಡಿದ್ದು, ಇದುವರೆಗೂ 92 ಕೈಗಾರಿಕೆಗಳೊಡನೆ ಪ್ಲೇಸ್‌ಮೆಂಟ್‌, ಇಂಡಸ್ಟ್ರಿಯಲ್ ವಿಸಿಟ್ಸ್, ಇಂಟರ್ನ್‌ಶಿಪ್ ಮತ್ತು ಕನ್ಸಲ್ಟೆನ್ಸಿ ವರ್ಕ್ ಚಟುವಟಿಕೆಗಳಿಗೆ ಒಪ್ಪಂದವಾಗಿದ್ದು, ವಿವಿಧ ಪ್ರತಿಷ್ಠಿತ ಕಂಪನಿಗಳ 11 ಸೆಂಟರ್ ಆಫ್ ಎಕ್ಸಲೆನ್ಸ್ ಒಳಗೊಂಡಿದೆ ಎಂದು ತಿಳಿಸಿದರು. 

ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಕಾಲೇಜಿನ ಚೇರ್ಮನ್ ಜಿ.ಎಂ. ಲಿಂಗರಾಜು, ಆಡಳಿತ ಅಧಿಕಾರಿ ವೈ.ಯು. ಸುಭಾಷ್‌ಚಂದ್ರ ಅವರು  ಅಭಿನಂದನೆಗಳನ್ನು ತಿಳಿಸಿದ್ದಾರೆ.

error: Content is protected !!