ಹರಪನಹಳ್ಳಿ, ಜು. 26 – ತಾಲ್ಲೂಕಿನಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದೂ ಸೇರಿದಂತೆ ಇತರೆ ಅಭಿವೃಧ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದೂ ಸೇರಿದಂತೆ, ನಮ್ಮ ಸಮಾಜದಲ್ಲಿರುವ ಅನಿಷ್ಟ ಪದ್ದತಿಗಳ ಬಗ್ಗೆ ಶಾಸಕರು ಸದನದ ಗಮನಕ್ಕೆ ತಂದಿರುವುದರಲ್ಲಿ ಯಾವುದೇ ತಪ್ಪು ಇರುವುದಿಲ್ಲ ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಉಪಾಧ್ಯಕ್ಷರಾದ ಟಿ.ವಿ. ರೇಣುಕಮ್ಮ ತಿಳಿಸಿದ್ದಾರೆ.
ಈ ಕುರಿತು ಪತ್ರಿಕೆ ಹೇಳಿಕಾ ನೀಡಿ ಅಧಿವೇಶನದಲ್ಲಿ ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ್ ದೇವದಾಸಿ ಪದ್ದತಿ ಜೀವಂತವಾಗಿದೆ ಎಂದು ಸದನಕ್ಕೆ ಸರಿಯಾದ ಮಾಹಿತಿ ನೀಡಿದ್ದಾರೆ. ಹಿಂದೂಳಿದ ಸಮಾಜದಲ್ಲಿ ಇಂದಿಗೂ ದೇವರ ಹೆಸರಿನಲ್ಲಿ ಮುಗ್ದ ಬಾಲಕಿಯರನ್ನು ದೇವದಾಸಿ ಮಾಡಲು ಮುಂದಾಗುವ ಮನಸ್ಸಿನ ಜನರಿರುವುದು ಸುಳ್ಳಲ್ಲ. ತಾಲ್ಲೂಕಿನಲ್ಲಿ ಕೆಲವು ತಿಂಗಳುಗಳ ಹಿಂದಷ್ಟೆ ಇಂತಹ ಪ್ರಯತ್ನಕ್ಕೆ ಮುಂದಾಗಿದ್ದ ಕುಟುಂಬಕ್ಕೆ ತಿಳುವಳಿಕೆ ನೀಡಿ ದೇವದಾಸಿ ಪದ್ದತಿಗೆ ಒಳಪಡಿಸುವುದನ್ನು ತಪ್ಪಿಸಲು ನಮ್ಮ ಸಂಘಟನೆಯ ಜೊತೆಗೆ ಇಲಾಖೆಯವರು ಕ್ರಮವಹಿಸಿರುವುದು ತಮಗೆ ತಿಳಿದ ವಿಷಯವಾಗಿದೆ.
ಶಾಸಕರ ಹೇಳಿಕೆ ಹಿಂದಾದರೂ ದೇವದಾಸಿ ಸಮರ್ಪಣಾ ನಿಷೇಧ ಕಾಯ್ದೆ ಇನ್ನಷ್ಟು ಬಲಗೊಳ್ಳಲು ಸರ್ಕಾರ ಗಮನ ಹರಿಸುವಂತಾಗಲಿ ಎಂಬುದು ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ಒತ್ತಾಯವಾಗಿದೆ ಎಂದರು.
ಈ ವೇಳೆ ಕರ್ನಾಟಕ ರಾಜ್ಯ ದೇವದಾಸಿ
ಮಹೆಳೆಯರ ವಿಮೋಚನಾ ಸಂಘದ ತಾಲ್ಲೂಕು ಅಧ್ಯಕ್ಷರಾದ ಎ.ಕೆ. ಹನುಮಕ್ಕ, ಉಪಾಧ್ಯಕ್ಷರಾದ
ಕೆ. ಕೆಂಚಮ್ಮ, ಎ. ಮುತ್ತಮ್ಮ, ಕೆ. ದುರ್ಗಮ್ಮ ಕಾರ್ಯದರ್ಶಿ ಮಂಜುಳಾ, ಸಹಕಾರ್ಯ ದರ್ಶಿ ಪಾರ್ವತಿ ಸೇರಿದಂತೆ ಇತರರು ಇದ್ದರು.