ಸಾರಥಿ ಗ್ರಾ.ಪಂ. 2 ನೇ ವಾರ್ಡ್‌ ಚುನಾವಣೆ – ಬಿಜೆಪಿ, ಕಾಂಗ್ರೆಸ್ ತಲಾ 2 ಸ್ಥಾನ ; ಜೆಡಿಎಸ್‌ಗೆ 1 ಸ್ಥಾನ

ಸಾರಥಿ ಗ್ರಾ.ಪಂ. 2 ನೇ ವಾರ್ಡ್‌ ಚುನಾವಣೆ –     ಬಿಜೆಪಿ,  ಕಾಂಗ್ರೆಸ್ ತಲಾ 2 ಸ್ಥಾನ ; ಜೆಡಿಎಸ್‌ಗೆ  1 ಸ್ಥಾನ

ಹರಿಹರ, ಜು.26- ತಾಲ್ಲೂಕಿನ ಸಾರಥಿ ಗ್ರಾಮ ಪಂಚಾಯಿತಿಯ ದೀಟೂರು ಗ್ರಾಮದ 2 ವಾರ್ಡ್‌ಗಳಿಗೆ ಕಳೆದ   23ರಂದು  ನಡೆದ ಚುನಾವಣೆಯಲ್ಲಿ  2 ಬಿಜೆಪಿ ಬೆಂಬಲಿತ, 2 ಕಾಂಗ್ರೆಸ್ ಬೆಂಬಲಿತ, 1 ಜೆಡಿಸ್ ಬೆಂಬಲಿತ, 1 ಪಕ್ಷೇತರ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.

 ದೀಟೂರು ವಾರ್ಡ್ ನಂ 1(ಅನುಸೂಚಿತ ಜಾತಿ) ರಲ್ಲಿ ಎಸ್.ಪಿ. ಕುಮಾರ್   197 ಮತ ಗಳಿಸಿದ್ದು,  ಚಂದ್ರಪ್ಪ 248 ಮತಗಳನ್ನು ಪಡೆದು  51 ಮತಗಳ ಅಂತರದಿಂದ ಗೆದ್ದಿರುತ್ತಾರೆ. 

ಹಿಂದುಳಿದ ವರ್ಗ `ಅ’ದಲ್ಲಿ  ಲಿಂಗಾಚಾರ್ 249 ಮತಗಳು, ಮಂಜಮ್ಮ 269 ಮತಗಳು ಪಡೆದಿದ್ದು 20 ಮತಗಳ ಅಂತರದಿಂದ ಮಂಜಮ್ಮ ಗೆದ್ದಿರುತ್ತಾರೆ. 

ಸಾಮಾನ್ಯ ಮಹಿಳೆ,  ಪ್ರಿಯಾಂಕಾ 392 ಮತಗಳು, ಮಾಲಾ ಹರೀಶ್ 328 ಮತಗಳು ಪಡೆದಿದ್ದು, 64 ಮತಗಳ ಅಂತರದಿಂದ ಪ್ರಿಯಾಂಕಾ ಗೆದ್ದಿರುತ್ತಾರೆ. 

ಹಿಂದುಳಿದ ವರ್ಗ `ಬಿ’ ಮಹಿಳೆ, ಹೂವಮ್ಮ ಆನ್ವೇರಿ 357, ನಿರ್ಮಲಾ ಹೆಚ್.ಬಿ. 83 ಮತಗಳನ್ನು ಪಡೆದಿದ್ದು ಹೂವಮ್ಮ 274 ಮತಗಳ ಅಂತರದಿಂದ ಗೆದ್ದಿರುತ್ತಾರೆ. 

ಸಾಮಾನ್ಯ ಕ್ಷೇತ್ರದಲ್ಲಿ ಹರಿಹರದ ಹನುಮಂತಪ್ಪ 114, ಪರಶುರಾಮಪ್ಪ  405, ಕೆ.ಎಸ್. ವೀರಪ್ಪ 84, ಮತಗಳನ್ನು ಪಡೆದಿದ್ದು, 291 ಮತಗಳ ಅಂತರದಿಂದ ಪರಶುರಾಮ್ ಗೆದ್ದಿರುತ್ತಾರೆ. ಸಾಮಾನ್ಯ ಮಹಿಳೆ ಹೆಚ್. ರೇಖಾ 410, ದೇವೀರಮ್ಮ 83  ಪಡೆದಿದ್ದು, ಹೆಚ್. ರೇಖಾ 327 ಮತಗಳ ಅಂತರದಿಂದ ಗೆದ್ದಿರುತ್ತಾರೆ. 

ದೀಟೂರು 1ನೇ ವಾರ್ಡಿನಿಂದ 726 ಮತಗಳಲ್ಲಿ 662 ಮತಗಳು ಮತ್ತು ವಾರ್ಡ್ ನಂ 2 ರಲ್ಲಿ 652 ಮತಗಳಲ್ಲಿ 567 ಮತಗಳು ಚಲಾವಣೆ ಆಗಿದ್ದವು. ವಿಶೇಷ ಅಂದರೆ ಬೆಳಗ್ಗೆಯಿಂದ ಸಂಜೆಯವರೆಗೆ ಸತತವಾಗಿ ಮಳೆ ಬೀಳುವುದನ್ನು ಲೆಕ್ಕಿಸದೆ ಶೇ 90 ಕ್ಕೂ ಹೆಚ್ಚು ಮತದಾರರು ಮತದಾನ ಮಾಡಿದ್ದಾರೆ.

ಇಂದು ನಡೆದ ಮತ ಎಣಿಕೆ ಕಾರ್ಯದಲ್ಲಿ, ಚುನಾವಣೆ ಅಧಿಕಾರಿಯಾಗಿ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಶಿಕುಮಾರ್, ಮತ ಎಣಿಕೆ ಸಿಬ್ಬಂದಿಗಳಾಗಿ ಶಿಕ್ಷಕರಾದ ಡಿ.ಎಂ. ಮಂಜುನಾಥಯ್ಯ, ಈಶಪ್ಪ ಬೂದಿಹಾಳ, ಬಿ.ಬಿ. ರೇವಣನಾಯ್ಕ್, ಅಜಯ್, ಚುನಾವಣೆ ಶಾಖೆಯ ಸಿಬ್ಬಂದಿಗಳಾದ ಸೋಮಶೇಖರ್,
ಉಮೇಶ್ ವಿವಿಧ ಪಕ್ಷಗಳ
ಮುಖಂಡರಾದ ವಾಮದೇವ ಶೇಖರಪ್ಪ, ನಿರಂಜನ, ಪಿಎಸ್ಐ ಚಿದಾನಂದ,
ಎಎಸ್ಐ ರಮೇಶ್ ಮತ್ತು ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.

error: Content is protected !!