ನಗರದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ

ದಾವಣಗೆರೆ, ಜು. 26- ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿನ ಅನ್ನಪೂರ್ಣೇಶ್ವರಿ ಕ್ಯಾಂಟಿನ್ ಪಕ್ಕದಲ್ಲಿ ಸುಮಾರು 55-60 ವರ್ಷದ ಮಹಿಳೆಯ ಶವ ಮೊನ್ನೆ ಪತ್ತೆಯಾಗಿದೆ.

ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಕಪ್ಪು-ಬಿಳಿ ಮಿಶ್ರಿತ ತಲೆ ಕೂದಲು ಹೊಂದಿದ್ದು, ಮೈಮೇಲೆ ಕೆಂಪುಬಣ್ಣದ ಜಾಕೆಟ್, ಬಿಳಿ ಪರ್ಪಲ್ ಕಲರ್, ಹೂವಿನ ಚಿತ್ತಾರವುಳ್ಳ ಸೀರೆ, ಕೆಂಪು ಬಣ್ಣ ಲಂಗ, ಹಳದಿ ಬಣ್ಣದ ಸ್ವೆಟರ್ ಧರಿಸಿರುತ್ತಾಳೆ.

ಸಂಬಂಧ ಪಟ್ಟವರು ಸ್ಥಳೀಯ ಬಡಾವಣೆ ಠಾಣೆ (08192272012, 08192-259213, 08192-253400, 08192-253100) ಯನ್ನು ಸಂಪರ್ಕಿಸುವುದು. 

error: Content is protected !!