ವಿದ್ಯಾರ್ಥಿಗಳು ದೇಶಪ್ರೇಮದೊಂದಿಗೆ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕು

ವಿದ್ಯಾರ್ಥಿಗಳು ದೇಶಪ್ರೇಮದೊಂದಿಗೆ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕು

ರಾಣೇಬೆನ್ನೂರಿನ ಕಾರ್ಯಕ್ರಮದಲ್ಲಿ ಕರ್ನಾಟಕ 27 ಬೆಟಾಲಿಯನ್ ಸುಬೇದಾರ್ ಬ್ರಹ್ಮಭೂಷಣ್ ಕರೆ

ರಾಣೇಬೆನ್ನೂರು, ಜು. 26 – ವಿದ್ಯಾರ್ಥಿಗಳು ದೇಶ ಪ್ರೇಮ ಬೆಳೆಸಿಕೊಂಡು ಭವಿಷ್ಯದಲ್ಲಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಕರ್ನಾಟಕ 27ನೇ ಬೆಟಾಲಿಯನ್ ಸುಬೇದಾರ್ ಬ್ರಹ್ಮಭೂಷಣ್ ಹೇಳಿದರು. 

ತಾಲ್ಲೂಕಿನ ಅಸುಂಡಿ ಗ್ರಾಮದ ಡಾ. ಕಡಕೋಳ ಪೋದಾರ್ ಲರ್ನ್ ಸ್ಕೂಲಿನಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಕಾರ್ಗಿಲ್ ವಿಜಯ ದಿವಸ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾರ್ಗಿಲ್ ಪ್ರದೇಶದ ಬಳಿ ಕುತಂತ್ರದಿಂದ ನಮ್ಮ ದೇಶದ ಗಡಿಯೊಳಕ್ಕೆ ನುಗ್ಗಿದ್ದ ವೈರಿ ದೇಶದ ಸೈನಿಕರನ್ನು ನಮ್ಮ ದೇಶದ ಯೋಧರು ವೀರಾವೇಶದಿಂದ ಕಾದಾಡಿ ಹೊಡೆದೋಡಿಸಿದರು. ಈ ಯುದ್ಧದಲ್ಲಿ ಹುತಾತ್ಮರಾದ ಸೈನಿಕರನ್ನು ಸ್ಮರಿಸಲು ಇಂದು ದೇಶದೆಲ್ಲೆಡೆ ಕಾರ್ಗಿಲ್ ವಿಜಯ ದಿವಸ ಆಚರಿಸಲಾಗುತ್ತಿದೆ ಎಂದರು. 

ಕರ್ನಾಟಕ 27 ಬೆಟಾಲಿಯನ್ ಹವಲ್ದಾರ್ ಗಣೇಶ ವಾಘ ಮಾತನಾಡಿದರು. ಸಮಾರಂಭದ ಅಂಗವಾಗಿ ಶಾಲಾ ಮಕ್ಕಳು ಪ್ರದರ್ಶಿಸಿದ ಕಿರು ನಾಟಕ ಹಾಗೂ ದೇಶಭಕ್ತಿ ಗೀತೆ ಎಲ್ಲರ ಮನಸೂರೆಗೊಂಡವು. 

ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪ್ರಶಾಂತ ಕಡಕೋಳ, ಕವಿತಾ ಕಡಕೋಳ, ರಾಜೇಶ್ವರಿ ಹನಗೋಡಿಮಠ, ಪ್ರಿನ್ಸಿಪಾಲ್‌ ರೂಪೇಶ ಘಾಟಗೆ, ಶಿಕ್ಷಕರುಗಳಾದ ಮಮತಾ ಘಾಟಗೆ, ಗೀತಾ, ರುಕ್ಸಾನ, ಸುಮ ಟಿ, ಹರ್ಷಿತಾ, ನಿಕತ್, ರಘುನಂದನ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

error: Content is protected !!