ದಾವಣಗೆರೆ, ಜು. 26 – ನಗರದ ಚಾಣಕ್ಯ ಪ್ರಥಮ ದರ್ಜೆ ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ಕ.ರಾ.ಮು ವಿ.ವಿ.ಯ ಕಲಿಕಾರ್ಥಿ ಸಹಾಯ ಕೇಂದ್ರದಡಿಯಲ್ಲಿ ಕ.ರಾ.ಮು. ವಿಶ್ವವಿದ್ಯಾನಿಲಯದ ದೂರ ಶಿಕ್ಷಣ ಕೋರ್ಸ್ಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಬಿಎ, ಬಿಕಾಂ, ಬಿಎಸ್ ಸಿ, ಬಿ.ಲಿಬ್, ಬಿಸಿಎ, ಬಿಬಿಎ, ಎಂಎ, ಎಂಕಾಂ, ಎಂ ಲಿಬ್, ಎಂಬಿಎ, ಎಂಎಸ್ಸಿ, ಎಂ ಎಸ್ ಡಬ್ಲ್ಯೂ ಹಾಗೂ ಇನ್ನಿತರೆ ಹಲವಾರು ಸ್ನಾತಕ ಮತ್ತು ಸ್ನಾತಕೋತ್ತರ ಪದವಿ, ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಕೆ. ರಾಜಶೇಖರ್ (99640 28812, 72591 30496) ತಿಳಿಸಿದ್ದಾರೆ.