ದಾವಣಗೆರೆ, ಜು.23- ಶ್ರೀ ತೊಗಟವೀರ ಸಮಾಜ ಸೇವಾ ಸಮಿತಿ ವತಿಯಿಂದ ಸಮಾಜದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.80 ಅಂಕ ಗಳಿಸಿದ ಹಾಗೂ ಯಾವುದೇ ಪದವಿಯಲ್ಲಿ ಶೇ.75 ಅಂಶಗಳನ್ನು ಪಡೆದ ಸಮಾಜದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳು ಆಗಸ್ಟ್ 1 ರೊಳಗಾಗಿ ಅರ್ಜಿಯ ಜೊತೆಗೆ ಇತ್ತೀಚಿಗಿನ 2 ಭಾವಚಿತ್ರ, ಅಂಕಪಟ್ಟಿ ಪ್ರತಿ, ಜಾತಿ ಪ್ರಮಾಣ ಪತ್ರ, ಮತ್ತು ಟಿ.ಸಿ ಯ ಪ್ರತಿಗಳನ್ನು ಶ್ರೀ ತೊಗಟವೀರ ಸಮುದಾಯ ಭವನದಲ್ಲಿ ಸಲ್ಲಿಸಲು ತಿಳಿಸಲಾಗಿದೆ.