ರಾಷ್ಟ್ರ ನಿರ್ಮಾಣಕ್ಕೆ ತಂಬಾಕು ಮತ್ತಿತರೆ ದುಶ್ಚಟಗಳಿಂದ ದೂರವಿರಿ ವಿಷಯ ಕುರಿತು ಸಂವಾದ ಕಾರ್ಯಕ್ರಮವು ಇಂದು ಬೆಳಿಗ್ಗೆ 11 ಗಂಟೆಗೆ ಶ್ರೀಮತಿ ನೀಲಮ್ಮ ಬೇತೂರು ಬಸಪ್ಪ ಪ್ರೌಢಶಾಲೆಯಲ್ಲಿ ನಡೆಯಲಿದೆ.
ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಸಂವಾದ ನಡೆಸುವರು.
ಮುಖ್ಯ ಅತಿಥಿಗಳಾಗಿ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ನಾಗರತ್ನಮ್ಮ ಸಿದ್ದಬಸಪ್ಪ, ಸಮಾಜ ಕಾರ್ಯಕರ್ತರು, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ದೇವರಾಜ್.ಕೆ.ಪಿ. ಮತ್ತು ಮಲ್ಲಾಬಾದಿ ಬಸವರಾಜ್ ಆಗಮಿಸುವರು.
ಅಧ್ಯಕ್ಷತೆಯನ್ನು ಬಿ.ಎಂ.ಮಹೇಶ್ವರಯ್ಯ ವಹಿಸುವರು. ಸಂವಾದದಲ್ಲಿ ರಾಷ್ಟ್ರ ನಿರ್ಮಾಣಕ್ಕೆ ತಂಬಾಕು ಮತ್ತಿತರೆ ದುಶ್ಚಟಗಳಿಂದ ದೂರವಿರಿ ವಿಷಯ ಕುರಿತು ಸಂವಾದ ನಡೆಯುವುದು.