ದಾವಣಗೆರೆ, ಜು.24 – ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ 2023-24ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ವಿವಿಧ ಕೋರ್ಸ್ಗಳ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಬಿ.ಎ, ಬಿ.ಕಾಂ., ಬಿ.ಎಸ್.ಸಿ., ಬಿ.ಲಿಬ್.ಐ.ಎಸ್.ಸಿ., ಬಿ.ಸಿ.ಎ., ಬಿ.ಬಿ.ಎ., ಬಿ.ಎಸ್.ಡಬ್ಲೂ., ಎಂ.ಎ., ಎಂ.ಕಾಂ., ಎಂ.ಎ-ಎಂ.ಸಿ.ಜೆ., ಎಂ.ಲಿಬ್.ಐ.ಎಸ್.ಸಿ., ಎಂ.ಬಿ.ಎ., ಎಂ.ಎಸ್.ಸಿ., ಎಂ.ಸಿ.ಎ., ಎಂ.ಎಸ್.ಡಬ್ಲೂ. ಪದವಿಗಳು ಹಾಗೂ ಸ್ನಾತಕೋತ್ತರ ಪದವಿ, ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸುಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 31 ರೊಳಗಾಗಿ ಕರಾಮುವಿ ಯ ಅಧಿಕೃತ ವೆಬ್ಸೈಟ್: www.ksoumysuru.ac.in ನಲ್ಲಿ ಆನ್ಲೈನ್ ಅಡ್ಮಿಷನ್ ಪೋರ್ಟಲ್ಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಭರ್ತಿ ಮಾಡಿ, ದಾವಣಗೆರೆ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ, ಆನ್ಲೈನ್ ಮೂಲಕ ಶುಲ್ಕ ಪಾವತಿಸಿ ಪ್ರವೇಶಾತಿ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ವಿವಿ ಅಧಿಕೃತ ಜಾಲತಾಣ www.ksoumysuru.ac.in ಅಥವಾ 8690544544, 8800335638, 9916009318, 8095939359 ಸಂಪರ್ಕಿಸಬಹುದು.