ಮಳೆಗೆ ಮನೆ ಗೋಡೆ ಕುಸಿತ, ವೀಕ್ಷಣೆ

ಮಳೆಗೆ ಮನೆ ಗೋಡೆ ಕುಸಿತ, ವೀಕ್ಷಣೆ

ಮಲೇಬೆನ್ನೂರು, ಜು.24- ಕಳೆದ 3-4 ದಿನಗಳಿಂದ ಸುರಿದ ಮಳೆ ಯಿಂದಾಗಿ ಮಲೇಬೆನ್ನೂರು ಹೋಬಳಿಯಲ್ಲಿ 6 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಬಿಳಸನೂರು, ಇಂಗಳಗೊಂದಿ, ಕುಣೆಬೆಳಕೆರೆ, ಹರಳಹಳ್ಳಿ, ಕೊಪ್ಪ ಮತ್ತು ಕುಂಬಳೂರಿನಲ್ಲಿ ತಲಾ ಒಂದೊಂದು ಮನೆಯ ಗೋಡೆಗಳು ಕುಸಿದು ಬಿದ್ದಿವೆ. ಎಲ್ಲೂ ಪ್ರಾಣ ಹಾನಿ ಆಗಿಲ್ಲ. ಕುಂಬಳೂರಿನಲ್ಲಿ ನಾಗಮ್ಮ ಎಂಬುವವರ ವಾಸದ ಮನೆಯ ಗೋಡೆ ಕುಸಿದು ಬಿದ್ದಿರುವುದನ್ನು ಉಪತಹಶೀಲ್ದಾರ್‌ ಆರ್‌. ರವಿ ವೀಕ್ಷಣೆ ಮಾಡಿದರು. ಗ್ರಾಮ ಲೆಕ್ಕಾಧಿಕಾರಿ ಶ್ರೀಧರ್‌ ಈ ವೇಳೆ ಹಾಜರಿದ್ದರು.

error: Content is protected !!