ದಾವಣಗೆರೆ, ಜು.23- ನಗರದ ದೇವರಾಜು ಅರಸು ಬಡಾವಣೆ `ಬಿ’ಬ್ಲಾಕ್ ನಲ್ಲಿರುವ ಜಿಲ್ಲಾ ಸಮಾದೇಷ್ಟರ ಕಚೇರಿ ಆವರಣದಲ್ಲಿ ಕಳೆದ ವಾರ ಜರುಗಿದ ಸಮಾರಂಭದಲ್ಲಿ, ವಿಧಾನಸಭಾ ಚುನಾವಣೆಯಲ್ಲಿ ಬಂದೋಬಸ್ತ್ ಕರ್ತವ್ಯದ ಯಶಸ್ವೀ ನಿರ್ವಹಣೆಗೆ ಪಾತ್ರರಾದ ಜಿಲ್ಲೆಯ ಘಟಕಾಧಿಕಾರಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ. ಅರುಣ್ ಅವರು ಸನ್ಮಾನಿಸಿದರು.
ದಾವಣಗೆರೆ ಘಟಕಾಧಿಕಾರಿ ಕೆ.ಎಸ್. ಅಮರೇಶ್, ಹರಿಹರ ಘಟಕಾಧಿಕಾರಿ ವೈ.ಆರ್. ಗುರುನಾಥಪ್ಪ, ಮಲೇಬೆನ್ನೂರು ಘಟಕಾಧಿಕಾರಿ ಜಿ.ಎಸ್. ಗುತ್ಯಪ್ಪ, ಜಗಳೂರು ಘಟಕಾಧಿಕಾರಿ ಷಡಾಕ್ಷರಿ, ಚನ್ನಗಿರಿ ಘಟಕಾಧಿಕಾರಿ ಎಂ. ರಾಜೇಶ್, ಹೊನ್ನಾಳಿ ಘಟಕಾಧಿಕಾರಿ ಕೆ. ನಾಗರಾಜಪ್ಪ, ನ್ಯಾಮತಿ ಘಟಕಾಧಿಕಾರಿ ಎಂ. ರಾಘವೇಂದ್ರ, ಸಂತೇಬೆನ್ನೂರು ಘಟಕಾಧಿಕಾರಿ ಡಿ.ಸಿ. ದೇವೇಂದ್ರಪ್ಪ, ಬಸವನಕೋಟೆ ಘಟಕಾಧಿಕಾರಿ ಟಿ. ಅಂಜಿನಪ್ಪ, ಬಿಳಿಚೋಡು ಘಟಕಾಧಿಕಾರಿ ವಿ.ಬಿ. ಅಜ್ಜಯ್ಯ ಅವರುಗಳು ಸನ್ಮಾನಕ್ಕೆ ಪಾತ್ರರಾದರು. ಹೋಂ ಗಾರ್ಡ್ ಜಿಲ್ಲಾ ಕಮಾಂಡೆಂಟ್ ಡಾ. ಎನ್.ಹೆಚ್. ಸುಜಿತ್‍ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಚೇರಿ ಸ್ಟಾಫ್ ಆಫೀಸರ್ ಡಾ. ಬಿ.ಹೆಚ್.ವೀರಪ್ಪ, ಮಾಜಿ ಸಮಾದೇಷ್ಟರು, ಘಟಕ ಮತ್ತು ಉಪ ಘಟಕಾಧಿಕಾರಿಗಳು, ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.