ದಾವಣಗೆರೆ,ಜು.21- ಶ್ರೀ ಓಂಕಾರೇಶ್ವರ ನಾಟಕ ಸಂಘದಿಂದ ನಾಡಿದ್ದು ದಿನಾಂಕ 23ರ ಭಾನುವಾರ ಸಂಜೆ 6 ಗಂಟೆಗೆ ಚಿಂದೋಡಿ ಲೀಲಾ ಕಲಾ ಕ್ಷೇತ್ರದಲ್ಲಿ ದಿ. ಕಣ್ವಿ ವಿರಚಿತ `ಹಳ್ಳಿ ಹುಡುಗಿ ಮೊಸರು ಗಡಿಗಿ’ ಕೌಟುಂಬಿಕ ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.
ರಂಗಭೂಮಿ ಕಲಾವಿದೆ ದಿ. ವಿ. ಮಂಜುಳಾ ಅವರ ಸವಿನೆನಪಿಗಾಗಿ, ಅವರ ತಾಯಿ – ಕಲಾವಿದೆ ಬಿ.ಓ. ವಿಜಯಲಕ್ಷ್ಮಿ ಅವರ ಸಹಾಯಾರ್ಥ ಏರ್ಪಡಿಸಿರುವ ಈ ನಾಟಕದಲ್ಲಿ ಕಾಮಿಡಿ ಕಿಲಾಡಿಗಳು ಸೀಸನ್-4 ವಿನ್ನರ್ ಹರೀಶ್ ಹಿರಿಯೂರು ಅವರು ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿವರಕ್ಕೆ ಸಂಪರ್ಕಿಸಿ : 96869-60489.