ದಾವಣಗೆರೆ, ಜು. 19- ಜೈನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ಕರ್ನಾಟಕ ರಾಜ್ಯ ವಿಜ್ಞಾನ – ತಂತ್ರಜ್ಞಾನ ಮಂಡಳಿಯ ಸಹಯೋಗದೊಂದಿಗೆ ಇಂಟಲೆಕ್ಚುಯಲ್ ಪ್ರಾಪರ್ಟಿ ರೈಟ್ಸ್ ಎನ್ನುವ ವಿಷಯದ ಕುರಿತು ಉಪನ್ಯಾಸಕರ ಕಾರ್ಯಾಗಾರವನ್ನು ಕಾಲೇಜಿನ ಸಭಾಂಗಣದಲ್ಲಿ ನಡೆಸಲಾಯಿತು.
ಮುಖ್ಯ ಅತಿಥಿಗಳಾದ ಯುಬಿಡಿಟಿ ಕಾಲೇಜಿನ ಕೈಗಾರಿಕಾ ಮತ್ತು ಉತ್ಪಾದನಾ ಇಂಜಿನಿಯರಿಂಗ್ ವಿಭಾಗದ ಪ್ರೊ. ಡಾ. ಎನ್. ನಾಗೇಶ್, ಕಾಲೇಜಿನ ಪ್ರಾಂಶುಪಾಲ ಡಾ. ಡಿ.ಬಿ. ಗಣೇಶ್, ಸಂಚಾಲಕರಾದ ಡಾ. ಸಂತೋಷ್ ಎಂ. ನೇಜಕರ್ ಹಾಗೂ ಸಂಯೋಜಕ ಡಾ. ಶ್ರೀನಿವಾಸ ಆರ್. ಮತ್ತು ಪ್ರೊ. ಹೆಚ್.ಬಿ. ಶರಣ ಬಸವೇಶ್ವರ ಉದ್ಘಾಟಿಸಿದರು.