ಹೊನ್ನಾಳಿ, ಜು. 19- ಶಿಕ್ಷಕಿ ಕೆ.ಎನ್. ಪ್ರತಿಮಾ ನಿಜಗುಣ ಶಿವಯೋಗಿ ಅವರಿಗೆ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯವು ಪಿಹೆಚ್.ಡಿ ಪದವಿ ನೀಡಿದೆ. ಪ್ರತಿಮಾ ಅವರು ‘ಶಿವತತ್ವ ರತ್ನಾಕರದಲ್ಲಿನ ನಾಟ್ಯ ಶಾಸ್ತ್ರೀಯ ವಂಶಗಳ ವಿಶ್ಲೇಷಣಾತ್ಮಕ ಅಧ್ಯಯನ’ ಎಂಬ ವಿಷಯದ ಬಗ್ಗೆ ಸಂಸ್ಕೃತದಲ್ಲಿ ಪ್ರಬಂಧ ಮಂಡನೆ ಮಾಡಿದ್ದರು. ಪ್ರತಿಮಾರವರು ಹೊನ್ನಾಳಿ ಹಿರೇಕಲ್ಮಠದ ಚನ್ನಪ್ಪಸ್ವಾಮಿ ವಿದ್ಯಾಪೀಠದ ಅಕ್ಕಮಹಾದೇವಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸಂಸ್ಕೃತ ಮತ್ತು ಕನ್ನಡ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ನಾತಕೋತ್ತರ ಸಂಸ್ಕೃತ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಡಾ. ಎಂ.ಎ. ಶೃತಿಕೀರ್ತಿ ಅವರ ಮಾರ್ಗದರ್ಶನದಲ್ಲಿ ಪ್ರತಿಮಾ ವಿಷಯ ಮಂಡನೆ ಮಾಡಿದ್ದರು. ಇದೇ ದಿನಾಂಕ 22 ರಂದು ಶನಿವಾರ ಶಿವಮೊಗ್ಗದ ಬಸವಸಭಾ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಪ್ರತಿಮಾ ಅವರಿಗೆ ಪದವಿ ಪ್ರದಾನ ಸಮಾರಂಭ ನಡೆಯಲಿದೆ.
January 10, 2025