ದಾವಣಗೆರೆ, ಜು. 19- ನಗರದ ಶ್ರೀ ಗಾಯತ್ರಿ ದೇವಿಯ ಉಪಾಸಕರ ಕ್ರಿಯಾತ್ಮಕ ಅಧ್ಯಾತ್ಮ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದ ಆಶ್ರಯದಲ್ಲಿ ಇದೇ ದಿನಾಂಕ 23 ರಂದು ಭಾನುವಾರ ಬೆಳಿಗ್ಗೆ 8-30 ರಿಂದ ಶ್ರೀ ಗಾಯತ್ರಿ ಹೋಮ, 10-30ಕ್ಕೆ ಶ್ರೀ ಸತ್ಯನಾರಾಯಣ ಸಾಮೂಹಿಕ ಪೂಜೆ ನಂತರ ಅಪರಾಹ್ನ 12-35ಕ್ಕೆ ಈ ಮಹತ್ವಪೂರ್ಣ ಪೂಜಾ ಸೇವಾಕರ್ತರಿಗೆ ಶ್ರೀ ಗಾಯತ್ರಿ ದೇವಿಯ ಸ್ಮರಣಿಕೆ, ಪೂಜಾ ಕಳಸ, ಶ್ರೀ ಸತ್ಯನಾರಾಯಣ ದೇವರ ಬಿಲ್ಲೆ ವಿತರಿಸುವ ಸಭಾ ಕಾರ್ಯಕ್ರಮವನ್ನು ನಗರದ ಶ್ರೀ ಸುಕೃತೀಂದ್ರ ಕಲಾಮಂದಿರ ದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಸಭಾ ಕಾರ್ಯಕ್ರಮದಲ್ಲಿ ಆವರಗೊಳ್ಳದ ಶ್ರೀ ಓಂಕಾರ ಶಿವಾಚಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅಧ್ಯಕ್ಷತೆಯನ್ನು ಪರಿವಾರದ ಅಧ್ಯಕ್ಷರಾದ ಡಾ|| ಸುಶೀಲಮ್ಮ ವಹಿಸಿಕೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಹಿರಿಯ ಪುರೋಹಿತರಾದ ಎಸ್. ಶಂಕರ ನಾರಾಯಣ ಶಾಸ್ತ್ರಿ, ದಾವಣಗೆರೆ ಪಾಟೀದಾರ ಸಮಾಜದ ಅಧ್ಯಕ್ಷ ಡಾ|| ರಮೇಶ್ ಪಟೇಲ್, ಬೆಂಗಳೂರಿನ ಸಿದ್ದಿ ಸಮಾಧಿ ಯೋಗ ಸಮಿತಿಯ ದಾವಣಗೆರೆ ಜಿಲ್ಲಾ ಮುಖ್ಯಸ್ಥರಾದ ಶ್ರೀಮತಿ ರೇಣುಕಮ್ಮ ಮಾತಾಜೀ, ಗೌಡ ಸಾರಸ್ವತ ಸಮಾಜದ ಅಧ್ಯಕ್ಷರಾದ ಶ್ರೀಮತಿ ಅಮಿತಾ ಡಾ|| ವೇಣುಗೋಪಾಲ್ ಪೈ, ಪರಿವಾರದ ಗೌರವಾಧ್ಯಕ್ಷ ಕೆ.ಹೆಚ್. ಮಂಜುನಾಥ್ ಆಗಮಿಸಲಿದ್ದಾರೆ ಎಂದು ಪರಿವಾರದ ಕೋಶಾಧ್ಯಕ್ಷ ಪುರುಷೋತ್ತಮ ಡಿ.ಪಟೇಲ್, ಸಂಚಾಲಕ ಭಾವನ್ನಾರಾಯಣ ತಿಳಿಸಿದ್ದಾರೆ.