ದಾವಣಗೆರೆ ಜು. 17 – ನಗರದ ದೇವರಾಜ ಅರಸು ಬಡಾವಣೆ `ಎ’ ಬ್ಲಾಕ್ ನ ಬಡಾವಣೆ ಯನ್ನು ಅಭಿವೃದ್ಧಿ ಪಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ಬಡಾವಣೆಯ ನಾಗರಿಕ ಹಿತರಕ್ಷಣಾ ಸಮಿತಿ ಮನವಿ ಸಲ್ಲಿಸಿದೆ.
ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷರೂ ಆಗಿರುವ ಬಡಾವಣೆಯ ಹಿರಿಯ ಮುಖಂಡ ಕೆ.ಎಸ್. ಮಲ್ಲೇಶಪ್ಪ, ಬಡಾವಣೆಯ ಪ್ರಮುಖರುಗಳಾದ ಎಸ್ಟಿಪಿ ತಿಪ್ಪೇಶ್, ಮಂಜುನಾಥ ಕಂಬಳಿ, ಸಾಮಾಜ ಸೇವಕ ಕೆ.ಎಂ.ವೀರಯ್ಯ ಹಾಗೂ 15ನೇ ವಾರ್ಡಿನ ಪಾಲಿಕೆ ಸದಸ್ಯ ಆಶಾ ಉಮೇಶ್ ಅವರುಗಳ ನೇತೃತ್ವದಲ್ಲಿ ಸಚಿವ ಎಸ್ಸೆಸ್ಸೆಂ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಸುಮಾರು 45 ವರ್ಷಗಳ ಬಡಾವಣೆ ಇದಾಗಿದ್ದು, ಈ ಬಡಾವಣೆಯಲ್ಲಿ ರಸ್ತೆಗಳೆಲ್ಲಾ ಹಾಳಾಗಿವೆ. ಸಿಸಿ ರಸ್ತೆ, ಬಾಕ್ಸ್ ಚರಂಡಿ, ಯುಜಿಡಿ ಪೈಪ್ ಲೈನ್ ಮತ್ತು ಶ್ರೀ ಸಿದ್ಧಗಂಗಾ ಶ್ರೀಗಳ ಉದ್ಯಾನವನ, ದೇವರಾಜು ಅರಸು ಬಡಾವಣೆಯ ಉದ್ಯಾನವನ, ಅಡ್ಡ ರಸ್ತೆಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಿ ಬಡಾವಣೆಯನ್ನು ಮಾದರಿ ಬಡಾವಣೆಯನ್ನಾಗಿ ಮಾಡಬೇಕು ಎಂದು ಸಚಿವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಕೇಳಿಕೊಳ್ಳಲಾಗಿದೆ.