ಡಿ.ಆರ್.ಆರ್. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಾಗೂ ಕರ್ನಾಟಕ ತಾಂತ್ರಿಕ ನಿರಂತರ ಶಿಕ್ಷಣ ಘಟಕದ ವತಿಯಿಂದ 2023-24ನೇ ಸಾಲಿನ ಪ್ರಥಮ ವರ್ಷದ ಹಾಗೂ ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ 10 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಬಾಪೂಜಿ ವಿದ್ಯಾಸಂಸ್ಥೆ ಸದಸ್ಯರಾದ ಡಾ.ಪ್ರಭಾ ಮಲ್ಲಿಕಾರ್ಜುನ ಮತ್ತು ಪಾಲಿಕೆ ಆಯುಕ್ತೆ ರೇಣುಕಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾಲೇಜಿನ ಪ್ರಾಚಾರ್ಯ ಡಾ. ಎ.ಎಂ. ರವಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಿ.ಸಿ.ಟಿಕ್ ಮ್ಯಾನೇಜರ್ ಎಡ್ವರ್ಡ್ ಸ್ಟ್ಯಾನ್ಲಿ, ಕುಲಸಚಿವ ಹೆಚ್. ಜಗದೀಶ್, ಸಂಯೋಜನಾಧಿಕಾರಿಗಳಾದ ವಿಭಾಗಾಧಿಕಾರಿ ಹೆಚ್.ಕೆ. ಮಂಜಪ್ಪ, ಟಿ. ಜ್ಯೋತಿಶ್ರೀ ಉಪಸ್ಥಿತರಿರುವರು.